ಉಡುಪಿ: ಸ್ವಂತ ತಾಯಿಯನ್ನೇ ಕತ್ತು ಹಿಸುಕಿ ಕೊಂದು ಹಾಕಿದ ದಾರುಣ ಘಟನೆ ಮಣಿಪಾಲದಲ್ಲಿ ಸಂಭವಿಸಿದೆ.
ಕೊಲೆಗೀಡಾದ ವ್ಯಕ್ತಿಯನ್ನು ಪದ್ಮಬಾಯಿ(45) ಎಂದು ಗುರುತಿಸಲಾಗಿದೆ.

ತನ್ನ ಹೆತ್ತ ತಾಯಿಯನ್ನೇ ಕೊಂದು ಹಾಕಿದ ಮಗ ಈಶ ನಾಯಕ್ (26)ಕೊಲೆ ಆರೋಪಿ. ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಜೂನ್ 18 ರಂದು ಅನಾರೋಗ್ಯ ಹಿನ್ನಲೆ ಪದ್ಮಬಾಯಿ ರವರನ್ನು ಉಡುಪಿಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ತನ್ನ ತಾಯಿಯ ಅನಾರೋಗ್ಯ ಹಿನ್ನಲೆ ಈಶ ನಾಯಕ್ ತನ್ನ ಚಿಕ್ಕಮ್ಮ ತಾಯಿಯ ತಂಗಿ ಶಿಲ್ಪಾ ಎಂಬವರಿಗೆ ಕರೆ ಮಾಡಿ ತನ್ನ ತಾಯಿಯ ಅನಾರೋಗ್ಯ ವಿಚಾರದಲ್ಲಿ ತಿಳಿಸಿ ಒಂದಷ್ಟು ಹಣವನ್ನು ಆನ್ ಲೈನ್ ಪೇ ಮುಕಾಂತರ ಹಾಕಿಸಿಕೊಂಡಿದ್ದ ಎನ್ನಲಾಗಿದೆ.
ಆದರೆ ಜೂನ್ 19 ರಂದು ಬೆಳೆಗ್ಗೆ ತಾಯಿ ಮೃತಪಟ್ಟಿದ್ದಾಗಿ ಈಶ ನಾಯಕ್ ತನ್ನ ಚಿಕ್ಕಮ್ಮನಿಗೆ ಕರೆ ಮಾಡಿ ತಿಳಿಸಿದ್ದ.
ಶಿಲ್ಪಾ ರವರು ಬೆಳಿಗ್ಗೆ ಆಸ್ಪತ್ರೆಗೆ ಬಂದು ಅಕ್ಕನ ಮೃತದೇಹ ನೋಡುವಾಗ ಕತ್ತಿನ ಬಾಗದಲ್ಲಿ ಕೆಂಪಾಗಿ ಕಂಡು ಬಂದಿದ್ದು.
ಈ ಬಗ್ಗೆ ಸಂಶಯದಿಂದ ಶಿಲ್ಪಾ ರವರು ಅಕ್ಕನ ಮರಣದ ಬಗ್ಗೆ ಸಂಶಯವಿರುವುದಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಪ್ರಕರಣ ದಾಖಲಿಸಿದರು.
ತದ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಯಾರೋ ದುಷ್ಕರ್ಮಿಗಳು ಕತ್ತು ಹಿಸುಕಿ ಕೊಂದಿದ್ದಾಗಿ ದೃಢಪಟ್ಟಿದೆ.
ಸ್ವತಹ ಮಗನೇ ತನ್ನ ತಾಯಿಯನ್ನು ಕೌಟುಂಬಿಕ ಕಲಹದಿಂದ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಪೋಲೀಸರ ತನಿಖೆಯಿಂದ ಹೊರ ಬಂದಿದೆ. ಸದ್ರಿ ಮಗನನ್ನು ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.