dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು : ಮಂಗಳೂರಿನ ಬೆಂಗ್ರೆ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರಕಾರಿ ಪ್ರಾಥಮಿಕ ಶಾಲೆಯು ಸೂಕ್ತ ಸೌಲಭ್ಯಗಳ ಕೊರತೆಯಿಂದ ಶಿಥಿಲಗೊಳ್ಳುವ ಪರಿಸ್ಥಿತಿ ಎದುರಾಗಿದ್ದು ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಬೆಂಗ್ರೆ ಘಟಕದ ಸಮೀಕ್ಷೆ ನಡೆಸಿದ ಪ್ರಕಾರ ಸರಕಾರ ವಿಧಿಸಿದ ನಿಯಮದಂತೆ ಕನಿಷ್ಠ 30:1 ಇರಬೇಕಿದ್ದ ವಿದ್ಯಾರ್ಥಿ-ಶಿಕ್ಷಕರ ಅನುಪಾತವು 530:4 ಕ್ಕೆ ಬಂದು ನಿಂತಿರುವುದು ದೃಢಪಟ್ಟಿರುತ್ತದೆ.

ಶಾಲೆಯು 18 ಕೊಠಡಿಗಳನ್ನು ಹೊಂದಿದ್ದು, ಅದರಲ್ಲಿ ಎಲ್ಲಾ ಮೇಲ್ಛಾವಣಿಗಳು ಸೋರುತ್ತಿದ್ದು, ಶಾಲೆಯಲ್ಲಿ ಬೆಂಚ್ ಹಾಗೂ ಮೇಜುಗಳ ಕೊರತೆಯೂ ಎದ್ದುಕಾಣುತ್ತಿರುವುದಲ್ಲದೆ ಶೌಚಾಲಯಗಳು ಕೂಡ ಬಳಸಲಾಗದಂತಹ ಸ್ಥಿತಿಯಲ್ಲಿದ್ದು ತರಗತಿಗಳು ಕೆಲವೇ ದಿನಗಳಲ್ಲಿ ಪ್ರಾರಂಭವಾಗುವುದರಿಂದ ಮೂಲ ಸೌಕರ್ಯಗಳ ಹಾಗೂ ಶೈಕ್ಷಣಿಕ ಸೌಲಭ್ಯಗಳ ಕೊರತೆಯು ಹಿಂದುಳಿದ ವಿದ್ಯಾರ್ಥಿಗಳಲ್ಲಿ ಅತೀವ ಸಂಕಷ್ಟವನ್ನುಂಟು ಮಾಡಬಹುದು.

'; } else { echo "Sorry! You are Blocked from seeing the Ads"; } ?>

ತಮ್ಮ ಪರಿಸರದ ಸರಕಾರಿ ಶಾಲೆಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಬೆಂಗ್ರೆ ಘಟಕವು ದಕ್ಷಿಣ ಕನ್ನಡ ಹೆಚ್ಚುವರಿ ಉಪ ಆಯುಕ್ತರನ್ನು ಭೇಟಿಯಾಗಿ ಈ ಕುರಿತು ಮನವಿ ಪತ್ರ ಸಲ್ಲಿಸಿ ಪರಿಸ್ಥಿತಿಯ ಕುರಿತು ವಿವರಿಸಿತು.

ಸಂಘಟನೆಯ ವಿದ್ಯಾರ್ಥಿಗಳ ಕಳಕಳಿಯನ್ನು ಶ್ಲಾಘಿಸಿದ ಅಧಿಕಾರಿ ಸೂಕ್ತ ಪರಿಹಾರವನ್ನು ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆಂದು ತಿಳಿದು ಬಂದಿದೆ.ಈ ಸಂದರ್ಭದಲ್ಲಿ ಜಿ.ಐ.ಒ ಬೆಂಗ್ರೆ ಘಟಕದ ಅಧ್ಯಕ್ಷೆ ಅಸ್ಮೀನಾ, ಕಾರ್ಯದರ್ಶಿ ಶಿರೀನ್ ಮತ್ತು ಜಿಲ್ಲಾಧ್ಯಕ್ಷೆ ಡಾ. ಆಯಿಶಾ ಫಿದಾ ಉಪಸ್ಥಿತರಿದ್ದರು.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!