dtvkannada

ಉಪ್ಪಿನಂಗಡಿ: ಯಾರೂ ಇಲ್ಲದ ಸಂದರ್ಭ ಸರಳಿಕಟ್ಟೆಯ ಮನೆಯೊಂದಕ್ಕೆ ಕಳ್ಳರು ನುಗ್ಗಿದ್ದು ಸುಮಾರು ಒಂದು ಲಕ್ಷ ಹಣ ಮತ್ತು ಹತ್ತು ಪವನ್ ಚಿನ್ನ ದೋಚಿ ಪರಾರಿಯಾಗಿರುವ ಘಟನೆ ವರದಿಯಾಗಿದೆ

ನಿನ್ನೆ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಈ ಘಟನೆ ನಡೆದಿದ್ದು ಉಪ್ಪಿನಂಗಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಗಾನ .ಪಿ.ಕುಮಾರ್, ಪುತ್ತೂರು ಗ್ರಾಮಾಂತ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಉಪ ನಿರೀಕ್ಷಕ ಕುಮಾರ್ ಸಿ ಕಾಂಬ್ಳೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆದ್ದಾರೆ. ಬೆರಳಚ್ಚು ತಙ್ಞರು ಸ್ಥಳಕ್ಕೆ ಆಗಮಿಸಿದ್ದಾರೆ.

ಸರಳಿಕಟ್ಟೆ ಬೇನಪ್ಪು ನಿವಾಸಿ ಅಬೂಬಕ್ಕರ್ ಮದನಿ ರವರ ಮನೆಗೆ ಕಳ್ಳರು ನುಗ್ಗಿದ್ದು, ಮನೆಯವರು ಇಲ್ಲದ ಸಮಯ ಕಳ್ಳರು ಹಣ ಹಾಗೂ ಚಿನ್ನದೊಂದಿಗೆ ಪರಾರಿಯಾಗಿದ್ದಾರೆ. ಇಂದು ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!