ಕಾರವಾರ: ಶೃಂಗೇರಿಯ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಕ್ಯಾಂಪಸ್‍ಗೆ ರಾಜೀವ್ ಗಾಂಧಿ ಹೆಸರನ್ನು ಬದಲಾಯಿಸಿ ಶಂಕರಾಚಾರ್ಯರ ಹೆಸರು ಬೇಕು ಅನ್ನುವ ಬೇಡಿಕೆ ಇದೆ. ರಾಜೀವ್ ಗಾಂಧಿ ಹೆಸರಿಗೆ ಬದಲಾಗಿ ಶಂಕರಾಚಾರ್ಯ ಹೆಸರನ್ನು ಇಡುವುದು ಸೂಕ್ತ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಕೈಗಡಿ ಗ್ರಾಮದಲ್ಲಿ ಪ್ರತಿಕ್ರೀಯಿಸಿದ ಅವರು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇವೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಪೋಸಲ್ ನೀಡಿದರೆ ಕೇಂದ್ರದ ಕಲ್ಚರ್ ಡಿಪಾರ್ಟಮ್ಮೆಂಟ್‍ನಲ್ಲಿ ಪರಿಶೀಲನೆ ಮಾಡಲು ಒತ್ತಡ ತರುತ್ತೇನೆ. ಇನ್ನು ದೇವಾಲಯಗಳನ್ನ ಒಡೆಯುವ ಮೊದಲು ಊರ ಜನರ ವಿಶ್ವಾಸ ಗಳಿಸಬೇಕು. ಆ ದೇವಾಲಯಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು, ದೇವಾಲಯ ಅಕ್ರಮವಾಗಿದ್ದರೇ ಊರಿನ ಜನರ ಮನವೊಲಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದರು.
2008ರ ದೇವಾಲಯ ಯಾವುದಿದೆ. ಅದನ್ನ ಸಕ್ರಮ ಮಾಡಬಹುದು ಎಂದು ಸುಪ್ರಿಮಕೋರ್ಟ್ ಆದೇಶವಿದೆ ಎಂದು ಮೈಸೂರಿನ ಘಟನೆಗೆ ಖಂಡನೆ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ, ಮೈಸೂರು ದೇವಾಲಯ ಚೋಳರ ಕಾಲದ್ದಾಗಿದೆ. ಸಕ್ರಮಗೊಳಿಸಲು ಪ್ರಕ್ರೀಯೆ ಮಾಡಬೇಕು. 2008ರ ನಂತರ ಕಟ್ಟಿದ ದೇವಾಲಯಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಪುರಾತನ ದೇವಾಲಯಗಳನ್ನ ಉಳಿಸುವ, ಸಕ್ರಮಗೊಳಿಸುವ ಬಗ್ಗೆ ಸರ್ಕಾರ ಪರಿಶೀಲಿಸಬೇಕು. ಇದೇ ಸಪ್ಟೆಂಬರ್ 22 ಕ್ಕೆ ಕೃಷಿ ರಪ್ತುದಾರರ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಕೃಷಿ ಸಂಬಂಧಿತ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದರು.