ಪುತ್ತೂರು: ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ನವರಾತ್ರಿ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಇಂದು ಅಗರ್ತಬೈಲು, ಬೀಡು, ಗುಂಡ್ಯಡ್ಕದ ಕುಟುಂಬಸ್ಥರ ಸಮ್ಮುಖದಲ್ಲಿ ಪೂಜೆ ವಿಧಿ ವಿಧಾನಗಳನ್ನು ನೆರವೇರಿಸಿಕೊಂಡು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಮಾಡಲಾಯಿತು.
ನವರಾತ್ರಿಯ ಪೂಜೆಯು ಎಂಟು ದಿನಗಳವರೆಗೆ ನಡೆಯಲಿದ್ದು ಮುಂಬರುವ ತಿಂಗಳ ಗುರುವಾರ 7ನೇ ತಾರಿಖಿನಿಂದ ಶುಕ್ರವಾರ 15 ನೇ ತಾರಿಖಿನವರೆಗೆ ನಡೆಯಲಿದೆ. ಮೂರು ಮನೆಯ ಕುಟುಂಬಸ್ಥರೆಲ್ಲರು ಸೇರಿಕೊಂಡು ವರ್ಷಂಪ್ರತೀ ಬಹಳ ವಿಜೃಂಭಣೆಯಿಂದ ಪೂಜೆ ಕಾರ್ಯಗಳನ್ನು ನಡೆಸುತ್ತಿದ್ದು ಈ ವರ್ಷ ಸರಕಾರದ ನಿಯಮಾನುಸಾರ ಕೊವೀಡ್ ನಿಯಮಗಳನ್ನು ಪಾಲಿಸಿಕೊಂಡು ಆಚರಿಸಲಿದ್ದೇವೆ ಎಂದು ಆಡಳಿತ ಕಮಿಟಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎನ್.ಎ ಸದಾಶಿವ ರೈ ಅಗರ್ತಬೈಲು ಆಡಳಿತ ಮೊಕ್ತೇಸರರು, ಕಾರ್ಯಸಮಿತಿಯ ಅಧ್ಯಕ್ಷರಾದ ಜಗನ್ಮೋಹನ ರೈ ಅಗರ್ತಬೈಲು, ಕಾರ್ಯದರ್ಶಿಯಾದ ಸುಭಾಶ್ಚಂದ್ರ ಶೆಟ್ಟಿ ಅಗರ್ತಬೈಲು, ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ರೈ ಅಗರ್ತಬೈಲು, ಅಗರ್ತಬೈಲು ಮಠದ ಭಜನೆಯ ಅಧ್ಯಕ್ಷರಾದ ಸುಮಲತಾ ಜೆ.ರೈ, ಪಂಚಾಯತ್ ಅಧ್ಯಕ್ಷರಾದ ಇಂದಿರಾ ಎಸ್.ರೈ ಬೀಡು, ಮಾಜಿ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಚಂದ್ರ ಆಳ್ವ, ಸಾಮಜಿಕ ಕ್ಷೇತ್ರ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ರಾಮಚಂದ್ರ ರೈ ಬೀಡು, ಗೌರಿ ಶಂಕರ್ ಗುಂಡ್ಯಡ್ಕ, ದೇವದಾಸ್ ರೈ ಗುಂಡ್ಯಡ್ಕ, ಸತ್ಯಪ್ರಸಾದ್ ರೈ ಕಬರಮೊಗೆರು ಮತ್ತು ಅಗರ್ತಬೈಲು,ಬೀಡು,ಗುಂಡ್ಯಡ್ಕ ಮನೆತನದ ಕುಟುಂಬಸ್ಥರು ಉಪಸ್ಥಿತರಿದ್ದರು.