ಸುಳ್ಯ, ಸೆ.27: ಸುಳ್ಯದಿಂದ ಲಡಾಕ್’ಗೆ ಸೈಕಲ್ ಮೂಲಕ ಯುವಕನೊಬ್ಬ ಪ್ರಯಾಣ ಬೆಳೆಸಿದ್ದು, ಸುಮಾರು 10 ತಿಂಗಳ ಸೈಕಲ್ ಪ್ರಯಾಣಕ್ಕೆ ಇಂದು ಸುಳ್ಯದಲ್ಲಿ ಚಾಲನೆ ನೀಡಲಾಯಿತು.
ಈ ಯುವಕನ ಹೆಸರು ಅಸ್ಕರ್.. ದೇಶ ಸುತ್ತಾಡಿ ಐತಿಹಾಸಿಕ ಹಾಗೂ ದಾರ್ಮಿಕ ಕ್ಷೇತ್ರಗಳನ್ನು ಕಣ್ತುಂಬಿಕೊಳ್ಳುವ ಧ್ಯೇಯ ಇವನು ಹೊಂದಿದ್ದಾನೆ. ಇತ್ತಿಚಿಗೆ ಸೈಕಲ್ ಮೂಲಕವೇ ಮಡಿಕೇರಿ ಮತ್ತು ಇತರೆಡೆ ತೆರಳಿದ್ದ ಅಸ್ಕರ್, ಇದೀಗ ತಮ್ಮ ಸೈಕಲ್ ಮೂಲಕ ಲಡಾಖ್’ಗೆ ದೀರ್ಘ ಪಯಣ ಬೆಳೆಸಿದ್ದಾರೆ.
ಸೆಪ್ಟೆಂಬರ್ 27ರಂದು ಬೆಳಗ್ಗೆ 11:00ಗಂಟೆಗೆ ಸುಳ್ಯದಿಂದ ಸೈಕಲ್’ನಲ್ಲಿ ಹೊರಟಿರುವ ಇವರು ಮಂಗಳೂರು, ಗೋವಾ, ಪುಣೆ, ಡೆಲ್ಲಿ, ಇಂದೋರ್, ಆಗ್ರಾ, ಶ್ರೀನಗರ ಮೂಲಕ ಲಡಾಖ್ ತಲುಪಲಿದ್ದಾರೆ.
ಒಂದು ದೇಶ.. 10 ತಿಂಗಳು.. 11,000 ಕಿಮೀ..!
ಸೈಕಲ್’ನಲ್ಲಿಯೇ ದಕ್ಷಿಣ ಕನ್ನಡದ ಯುವಕನ ಸಾಹಸ ಯಾತ್ರೆಗೆ ಊರಿನ ಜನತೆ ಸಹಕಾರ ನೀಡಿದ್ದು, ಕರ್ನಾಟಕ, ತೆಲಂಗಾಣ, ಮಹಾರಾಷ್ಟ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಪಂಜಾಬ್, ಹರಿಯಾಣ, ಜಮ್ಮುಕಾಶ್ಮೀರ, ಲಡಾಖ್ ಸೇರಿ 14 ರಾಜ್ಯಗಳ ಮೂಲಕ ದೇಶ ಪ್ರಯಾಣ ನಡೆಸಲಿದ್ದಾರೆ.
ಮೂಲತಃ ಸುಳ್ಯ ತಾಲೂಕಿನ ಗಾಂಧಿನಗರ ನಿವಾಸಿ ಸಿರಾಜ್ ಮಿಶ್ರಿಯ ದಂಪತಿಯ ಪುತ್ರನಾದ ಅಸ್ಕರ್, ಬಾಲ್ಯದಿಂದಲೂ ದೇಶ ಸುತ್ತಬೇಕು ಎನ್ನುವ ಕನಸನ್ನು ಹೊಂದಿದ್ದ. ಹೀಗಾಗಿ ತನ್ನ ಸೈಕಲ್’ನಲ್ಲಿ ಲಡಾಖ್ ಯಾತ್ರೆ ಮಾಡ್ತಿದ್ದೇನೆ ಎಂದು ಇವರು ಪ್ರತಿಕ್ರಯಿಸಿದ್ದಾರೆ.