ಬೆಳಗಾವಿ: ಕೋರ್ಟ್ ಆವರಣದಲ್ಲೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ಕೋರ್ಟ್ ಆವರಣದಲ್ಲಿ ನಡೆದಿದೆ. ಪತ್ನಿಯ ಕೈ, ಕಾಲು, ತಲೆ ಭಾಗಕ್ಕೆ ಸ್ವತಃ ಪತಿ ಮಚ್ಚಿನಿಂದ ಹೊಡೆದು ಘಾಸಿಗೊಳಿಸಿದ್ದಾನೆ. ನನಗುಂಡಿಕೊಪ್ಪದ ನಿವೃತ್ತ ಸೈನಿಕ ಶಿವಪ್ಪ ಅಡಕಿಯಿಂದ ಕೃತ್ಯ ನಡೆದಿದೆ.
ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ಪತ್ನಿ ಹತ್ಯೆ ಮಾಡಲು ಪತಿಯೇ ಯತ್ನಿಸಿದ ದುರ್ಘಟನೆ ನಡೆದಿದೆ. ಕೋರ್ಟ್ ಆವರಣದಲ್ಲಿ ಇಂತಹ ಕೃತ್ಯ ಯತ್ನ ನಡೆದಿರುವುದು ಆಘಾತಕಾರಿಯಾಗಿದೆ.
ಹಣಕಾಸಿನ ವಿಚಾರಕ್ಕೆ ಪತಿ ಪತ್ನಿಯ ಮಧ್ಯೆ ಕಲಹ ಇತ್ತು. ಪತಿ ಪತ್ನಿಯ ಮಧ್ಯದ ಕಲಹ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣ ಇತ್ತು. ಸೈನಿಕ ಶಿವಪ್ಪ, 11 ವರ್ಷಗಳ ಹಿಂದೆ ವರೂರ್ ಗ್ರಾಮದ ಜಯಮಾಲಾ ಎಂಬವರನ್ನು ಮದುವೆಯಾಗಿದ್ದ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ವರೂರ್ ಗ್ರಾಮದ ಜಯಮಾಲಾರನ್ನು ಮದುವೆ ಆಗಿದ್ದ. ಆ ಬಳಿಕ, ಕೌಟುಂಬಿಕವಾಗಿ ಹಣಕಾಸಿನ ವಿಚಾರದಲ್ಲಿ ಕಲಹ ಇತ್ತು. ಇಂದು ಬೈಲಹೊಂಗಲ ದಿವಾಣಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಇತ್ತು. ವಿಚಾರಣೆಗೆ ಬಂದ ಪತ್ನಿಯ ಮೇಲೆ ಪತಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪತ್ನಿ ಜಯಮಾಲಾ ಸ್ಥಿತಿ ಗಂಭೀರವಾಗಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.