';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೆಂಗಳೂರು: ವೃದ್ಧಾಶ್ರಮಗಳಿಗೆ ಸರ್ಕಾರದಿಂದ ಒದಗಿಸುವ ಅನುದಾನವನ್ನು 25 ಲಕ್ಷದಿಂದ 40 ಲಕ್ಷಕ್ಕೆ ಹೆಚ್ಚಳ ಮಾಡುತ್ತೇನೆ ಎಂದು ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
14567 ಹಿರಿಯ ನಾಗರಿಕರ ಸಹಾಯವಾಣಿಯಾಗಿದೆ. ಸರ್ಕಾರದ ಸೌಲಭ್ಯ, ಪಿಂಚಣೆ, ಪೋಷಕರ ಪಾಲನೆ ಪೋಷಣೆ ಅವರ ಯೋಗಕ್ಷೇಮದ ಬಗ್ಗೆ ಈ ಸಂಖ್ಯೆಯ ಮೂಲಕ ವಿಚಾರಿಸಬಹುದು. 35 ವೃದ್ಧಾಶ್ರಮಗಳನ್ನು ವಿಕಲ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದಿಂದ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಕರ್ನಾಟಕದಲ್ಲಿ 45 ಲಕ್ಷ ಜನ ಹಿರಿಯ ನಾಗರಿಕರಿದ್ದಾರೆ. ಅವರೆಲ್ಲ ಆರೋಗ್ಯವಾಗಿರಬೇಕು ಎನ್ನುವುದು ನನ್ನ ಆಶಯ. ಪ್ರತಿಯೊಬ್ಬರಲ್ಲೂ ಚಿಕ್ಕ ಮಕ್ಕಳ ಭಾವವಿದೆ. ಹಿರಿಯರಿಗೆ ನಾವು ಗೌರವ ಕೊಡಬೇಕು, ನೆರವಾಗಬೇಕು ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.