dtvkannada

'; } else { echo "Sorry! You are Blocked from seeing the Ads"; } ?>

ಸುಳ್ಯ : ತಾಲೂಕಿನ ಅಡ್ಕಾರು ಮಾವಿನ ಕಟ್ಟೆ ಬಳಿಯಿಂದ ನೂರಾರು ಜನರ ಮೆರವಣಿಗೆ ಸಾಗಿ ಅಡ್ಕಾರು ಅಂಬೇಡ್ಕರ್ ಭವನದ ಬಳಿ ಸಮಾಪನಗೊಂಡು. ಅಡ್ಕಾರಿನಲ್ಲಿ ನಿರ್ಮಾಣಗೊಂಡ ಅಂಬೇಡ್ಕರ್ ಸಮುದಾಯ ಭವನಕ್ಕೆ ಸತತ 27 ವರ್ಷಗಳೇ ಕಳೆದಿದ್ದು ಭವನ ನಿರ್ಮಾಣಕ್ಕೆ ಇಂದು ಮುಹೂರ್ತ ಕೂಡಿ ಬಂದಿದ್ದು ವಿಶೇಷವಾಗಿತ್ತು.

ಅಂಬೇಡ್ಕರ್ ಭವನ ನಿರ್ಮಾಣಗೊಂಡು ಜನರ ಉಪಯೋಗಕ್ಕೆ ಸಿಗದಿರುವ ಕಾರಣ ಗ್ರಾಮಸ್ಥರು ಕೆಲವು ದಿನಗಳ ಹಿಂದೆಯಷ್ಟೆ ಆಕ್ರೋಶ ಹೊರ ಹಾಕಿದ್ದರು. ಅಂಬೇಡ್ಕರ್ ಭವನವನ್ನು ಆದಷ್ಟು ಬೇಗ ಉದ್ಘಾಟಿಸಿ ಗ್ರಾಮಸ್ಥರಿಗೆ ಉಪಯೋಗಕ್ಕೆ ನೀಡುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಸಂಬಂಧ ಪಟ್ಟ ಇಲಾಖೆಗೆಳಿಗೆ ಮನವಿ ಸಲ್ಲಿಸಿತು.

'; } else { echo "Sorry! You are Blocked from seeing the Ads"; } ?>

ಇಂದು ಗಾಂಧಿ ಜಯಂತಿ ಕಾರ್ಯಕ್ರಮ ಮತ್ತು ನವೀಕೃತ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆಯನ್ನು ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಬು ಕೆ. ರವರು ಉದ್ಘಾಟಿಸಿ, ಭವನ ಆವರಣದ ಬಳಿ ಡಾ. ಬಿ ಆರ್ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ಘನ ತ್ಯಾಜ ಸಂಗ್ರಹಣೆ ವಾಹನಕ್ಕೆ ಚಾಲನೆ ನೀಡಿದರು.

ಈ ದಿನ ನಡೆದ ಸಭಾ ಕಾರ್ಯಕ್ರಮ ಉದ್ಘಾಟನೆ ಹಾಗೂ ಅಂಬೇಡ್ಕರ್ ಅವರ ಮತ್ತು ಗಾಂಧೀಜಿಯವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದ ಬಾಬು ಕೆ. ರವರು ಈ ಸಬಾಂಗಣ ಅಚ್ಚುಕಟ್ಟಾಗಿ ನಿರ್ಮಾಣವಾಗಲು ಕಾರಣ ಕರ್ತರಾದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

'; } else { echo "Sorry! You are Blocked from seeing the Ads"; } ?>

ಈ ದೇಶಕ್ಕಾಗಿ ಹೋರಾಟ ಮಾಡಿದ ಮಹಾತ್ಮ ಗಾಂಧೀಜಿಯವರ ಜನ್ಮ ದಿನ ದಿನಾಚರಣೆಯ ಶುಭಾಶಯಗಳನ್ನು ಹೇಳಿದರು.‌ಕಾರ್ಯಕ್ರಮದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಸುಂದರ್ ಪಾಟಾಜೆ ಹಾಗೂ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!