ಕೊಪ್ಪಳ: ಪೊಲೀಸರ ಸೋಗಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಗದಗ ಮೂಲದ ಸಂಜಯ ಕೊಪ್ಪದ ಮತ್ತು ನರಗುಂದ ಮೂಲದ ಸಂಜು ಛಲವಾದಿ ಬಂಧಿತ ಆರೋಪಿಗಳು. ಬಂಧಿತರು ಆಗಸ್ಟ್ 15ರಂದು ಭೀಮೇಶ್ ಎಂಬುವವರ ಬೈಕ್ ತಡೆದು 1,000 ರೂ. ವಸೂಲಿ ಮಾಡಿದ್ದರು.
ಈ ಘಟನೆ ಕೊಪ್ಪಳ ಹೊರವಲಯದಲ್ಲಿ ನಡೆದಿತ್ತು. ಭೀಮೇಶ್ ಬೈಕ್ನಲ್ಲಿ ಮುನಿರಾಬಾದ್ಗೆ ಹೊರಟಾಗ ಹಣ ವಸೂಲಿ ಮಾಡಿದ್ದರು. ಜೊತೆಗೆ ಎಟಿಎಂ ಪಿನ್ ಪಡೆದು 1,500 ರೂ. ಡ್ರಾ ಮಾಡಿಕೊಂಡಿದ್ದರು. ಸದ್ಯ ಆರೋಪಿಗಳನ್ನು ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆಆರೋಪಿಗಳು ತಾವು ಪೊಲೀಸ್ ಅಧಿಕಾರಿಗಳೆಂದು ವಾಹನ ತಪಾಸಣೆ ಮಾಡುತ್ತಿದ್ದರು. ಭೀಮೇಶ ಪರ್ಸ್ನಲ್ಲಿದ್ದ 1,000 ರೂ. ಹಣವನ್ನು ವಸೂಲಿ ಮಾಡುತ್ತಾರೆ. ಮಾತ್ರವಲ್ಲದೇ ಅವರ ಎಟಿಎಂ ಕಾರ್ಡ್ ಪಿನ್ ಪಡೆದು 1.500 ರೂ. ಹಣವನ್ನು ಡ್ರಾ ಮಾಡಿಕೊಳ್ಳುತ್ತಾರೆ. ಈ ಕುರಿತು ಭೀಮೇಶ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆಯ ನಂತರ ಇಬ್ಬರನ್ನು ಬಂಧಿಸಲಾಗಿದೆ.
ಈ ಇಬ್ಬರು ಇಂಥ ಹಲವಾರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರೆಂದು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರಂತೆ. ಗದಗ, ಅಣ್ಣಿಗೇರಿ, ಹುಬ್ಬಳ್ಳಿಯ ವಿವಿಧ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.