ಪುತ್ತೂರು : ಕರ್ನಾಟಕ ರಾಜ್ಯ ಸರಕಾರ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ನಡೆಸಲು ಸರಕಾರ ಸುತ್ತೋಲೆ ಕಳುಹಿಸಿದ ಸಂದರ್ಭದಲ್ಲಿ ರಾಜ್ಯದ ಗೃಹಮಂತ್ರಿಯಾಗಿದ್ದ ಡಾ ಜಿ ಪರಮೇಶ್ವರ್ ಅವರ ಗಮನ ಸೆಳೆದ ಹಾರಾಡಿ ಸರಕಾರಿ ಶಾಲೆಯ 8 ತರಗತಿ ವಿದ್ಯಾರ್ಥಿ ದಿವಿತ್ ರೈ ಯ ಮಾತಿಗೆ ಕಟ್ಟುಬಿದ್ದು ಆದೇಶವನ್ನು ತಡೆಹಿಡಿದು ಜಿಲ್ಲೆಯ ಬಹುತೇಕ ಶಾಲೆಗಳ ಶಿಕ್ಷಕರ ಅವೈಜ್ಞಾನಿಕ ವರ್ಗಾವಣೆ ರದ್ದಾಗಿತ್ತು.
ದಿವಿತ್ ಗೆ ಶಿಕ್ಷಕರ ಮೇಲಿರುವ ಗೌರವ ಮತ್ತು ವಿದ್ಯಾರ್ಜನೆಗೆ ಅನುಕೂಲ ಆಗುವಂತೆ ಅವೈಜ್ಞಾನಿಕ ವರ್ಗಾವಣೆ ಬಗ್ಗೆ ಪ್ರತಿರೋಧ ತೋರಿಸಿ ಸಹಪಾಠಿಗಳ ಶಿಕ್ಷಣದ ಬಗ್ಗೆ ಇರುವ ಕಾಳಜಿಯನ್ನು ಮೆಚ್ಚಿದ ಡಾ ಜಿ ಪರಮೇಶ್ವರ್. ವಿದ್ಯಾರ್ಥಿಯ ಇಡೀ ಕುಟುಂಬವನ್ನು ವಿಕಾಸ ಸೌಧಕ್ಕೆ ಕರೆಸಿ ಗೌರವಿಸಿದ್ದರು. ಅವನ ವಿನಂತಿಯಮೇರೆಗೆ ಪುತ್ತೂರಿನ ಹಾರಾಡಿ ಶಾಲೆಗೆ ಬಂದು ₹ 10 ಲಕ್ಷ ಅನುದಾನ ನೀಡಿ ಇವನನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸುವುದಾಗಿ ಘೋಷಿಸಿದ್ದರು.
ದಿವಿತ್ ಸ್ಕೌಟ್ & ಗೈಡ್ಸ್ ನಲ್ಲಿ ಜಪಾನ್ ಗೆ ಹೋಗುವಾಗಲೂ ಪ್ರಾಯೋಕತ್ವ ನೀಡಿದ್ದರು. ತನ್ನ ಮಾತಿನಂತೆ ದಿವಿತ್ ನೊಂದಿಗೆ ಇಂದಿನವರೆಗೂ ನಿರಂತರ ಸಂಪರ್ಕದಲ್ಲಿದ್ದುಕೊಂಡು ಇದೀಗ ಪಿಯುಸಿ ಮುಗಿಸಿದ ಅವನನ್ನು ಮಂಗಳೂರು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ Information science ವಿಭಾಗಕ್ಕೆ ದಾಖಲಾತಿ ಮಾಡಿದ್ದಾರೆ.
ಈಗ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ SSLC ಯಲ್ಲಿ ವಿದ್ಯಾಭ್ಯಾಸ ದಿವಿತ್ ನ ಸಹೋದರ ಪವಿತ್ ರೈಗೂ ಮೆಡಿಕಲ್ ಕಲಿಸುವ ಭರವಸೆ ನೀಡಿದ್ದಾರೆ.ಸತತ ನಾಲ್ಕು ವರ್ಷಗಳಿಂದ ವಿದ್ಯಾರ್ಥಿಯ ಪೂರ್ವಾಪರ ವಿಚಾರಿಸುಕೊಂಡು ಪ್ರೋತ್ಸಾಹಿಸುತ್ತಾ ಬಂದಿರುವ ಪರಮೇಶ್ವರ್ ನುಡಿದಂತೆ ನಡೆದು ಎಲ್ಲಾ ರಾಜಕಾರಣಿಗಳಿಗೆ ಆದರ್ಶರಾಗಿದ್ದಾರೆ.