dtvkannada

'; } else { echo "Sorry! You are Blocked from seeing the Ads"; } ?>

ಮುಂಬೈ: ಲಕ್ನೋ- ಮುಂಬೈ ಮಾರ್ಗದ ಪುಷ್ಪಕ್ ಎಕ್ಸ್​ಪ್ರೆಸ್ ರೈಲಿನಲ್ಲಿ 20 ವರ್ಷದ ಯುವತಿ ಮೇಲೆ ದರೋಡೆಕೋರರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಮಹಾರಾಷ್ಟ್ರದ ಇಗತ್ಪುರಿ ಮತ್ತು ಕಾಸರ ರೈಲ್ವೆ ನಿಲ್ದಾಣಗಳ ನಡುವೆ ಈ ಅತ್ಯಾಚಾರ ನಡೆಸಲಾಗಿದ್ದು, ಯುವತಿ ನೀಡಿದ ದೂರಿನ ಆಧಾರದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.ಶುಕ್ರವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಮುಂಬೈ ರೈಲ್ವೆ ಪೊಲೀಸರು ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

ಈ ಬಗ್ಗೆ ತಿಳಿಸಿರುವ ಮುಂಬೈ ಜಿಆರ್‌ಪಿಯ ಪೊಲೀಸ್ ಆಯುಕ್ತ ಕೈಸೆರ್ ಖಾಲಿದ್, ಪುಷ್ಪಕ್ ಎಕ್ಸ್‌ಪ್ರೆಸ್ ರೈಲು ಘಾಟ್ ವಿಭಾಗದಲ್ಲಿ ಸಂಚರಿಸುವಾಗ ಯುವತಿ ಮೇಲೆ ಅತ್ಯಾಚಾರ ನಡೆಸಲಾಗಿದೆ. ಆರೋಪಿಗಳು ಇಗತ್ಪುರಿಯಲ್ಲಿ (ಔರಂಗಾಬಾದ್ ರೈಲ್ವೇ ಜಿಲ್ಲೆ) ಲಕ್ನೋ-ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್‌ಗೆ ಸ್ಲೀಪರ್ ಬೋಗಿ ಡಿ -2 ನಲ್ಲಿ ಪ್ರಯಾಣಿಸುತ್ತಿದ್ದರು.

ಘಾಟ್ ಪ್ರದೇಶದಲ್ಲಿ ರೈಲು ಚಲಿಸುತ್ತಿದ್ದಾಗ ಶುಕ್ರವಾರ ರಾತ್ರಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾರೆ.ರೈಲು ಕಾಸರವನ್ನು ತಲುಪಿದಾಗ ಆ ಯುವತಿಯ ಸ್ಥಿತಿಯನ್ನು ನೋಡಿದ ಪ್ರಯಾಣಿಕರು ರೈಲ್ವೆ ಸಿಬ್ಬಂದಿ ಬಳಿ ಸಹಾಯ ಮಾಡುವಂತೆ ಕೋರಿದರು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು, ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!