ಬೆಂಗಳೂರು: ಸಿಲಿಕಾನ್ ಸಿಟಿ ಹೊರವಲಯ ಬೇಗೂರಲ್ಲಿ ನಡೆದಿದ್ದ ತಾಯಿ-ಮಗಳ ಕೊಲೆ ಕೇಸ್‍ನ ಆರೋಪಿ ಪ್ರಶಾಂತ್‍ನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.ಫೇಸ್‍ಬುಕ್‍ನಲ್ಲಿ ಪರಿಚಯ ಆಗಿದ್ದ ಚಂದ್ರಕಲಾ ವೀಡಿಯೋವೊಂದನ್ನು ಬ್ಲ್ಯಾಕ್‍ಮೇಲ್ ಮಾಡಿದ್ದೇ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ.
ಫೇಸ್‍ಬುಕ್‍ನಲ್ಲಿ ಪ್ರಶಾಂತ್‍ಗೂ ಚಂದ್ರಕಲಾಗೂ ಪರಿಚಯ ಆಗಿತ್ತು. ಮನೆಗೆ ಬರುವಂತೆ ಪ್ರಶಾಂತ್‍ಗೆ ಚಂದ್ರಕಲಾ ಒತ್ತಾಯಿಸ್ತಿದ್ಳು. ಹೀಗಾಗಿ ಚಂದ್ರಕಲಾ ನೋಡಲು ಬಳ್ಳಾರಿಯಿಂದ ಬಂದಿದ್ದ. ಆ ದಿನ ಚಂದ್ರಕಲಾ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ವೇಳೆ ಅಂಗಿ ಹಾಕದೇ ಪಂಚೆಯಲ್ಲೇ ಮಲಗಿದ್ದ. ಇದರ ವೀಡಿಯೋವನ್ನು ಚಂದ್ರಕಲಾ ರೆಕಾರ್ಡ್ ಮಾಡಿ ಹಣ ಕೊಡುವಂತೆ ಇಲ್ಲವಾದ್ರೆ ಫೇಸ್‍ಬುಕ್‍ನಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಳು.
ಆಗ ಇಬ್ಬರ ನಡುವೆಯೂ ಗಲಾಟೆ ಆಗಿದೆ. ಈ ವೇಳೆ ಆಕೆಯ ನಾಲ್ಕು ವರ್ಷದ ಮಗಳು ಅಡ್ಡಬಂದಿದ್ಳು. ಮಗಳನ್ನು ತಳ್ಳಿದ್ದರಿಂದ ಕೋಪಗೊಂಡ ಚಂದ್ರಕಲಾ ಚಾಕು ತಂದ್ಳು. ಅದೇ ಚಾಕುವಿನಿಂದ ಪ್ರಶಾಂತ್ ಚಂದ್ರಕಲಾ ಮತ್ತು ಆಕೆಯ ಮಗುವನ್ನು ಕೊಲೆ ಮಾಡಿ ಪರಾರಿ ಆಗಿದ್ದನು.ಸದ್ಯ ಪ್ರಶಾಂತ್‍ನನ್ನು ಬೇಗೂರು ಪೊಲೀಸರು ಬಳ್ಳಾರಿಯಲ್ಲಿ ಅರೆಸ್ಟ್ ಮಾಡಿ ಕರೆತಂದಿದ್ದಾರೆ.