dtvkannada

'; } else { echo "Sorry! You are Blocked from seeing the Ads"; } ?>

ಮೂಡಬಿದ್ರೆ: ಚಿಕ್ಕಂದಿನಿಂದಲೆ ಕನ್ನಡ ಎಂದರೆ ತುಂಬಾ ಅಭಿಮಾನ ಮತ್ತು ಕನ್ನಡದ ಬಗ್ಗೆ ಅತೀ ಪ್ರೀತಿ ಹೊಂದಿದ್ದು ಕಥೆ, ಕವನ, ಲೇಖನಗಳನ್ನು ಬರೆಯುದರಲ್ಲಿ ತುಂಬಾ ಆಸಕ್ತಿ ಹೊಂದಿದ್ದಾರೆ ಮಾನಸರವರು.

ನವಪರ್ವ ಎಂಬ ಸಾಹಿತ್ಯ ಬಳಗದಿಂದ ಪ್ರಾರಂಭವಾದ ಇವರ ಸಾಹಿತ್ಯ ಸೇವೆ ನಿರಂತರ ಸಾಗುತ್ತಿದ್ದು ಹಲವಾರು ದಿನ ಪತ್ರಿಕೆ ಮತ್ತು ವಾರಪತ್ರಿಕೆ ಹಾಗೂ ಮಾಸ ಪತ್ರಿಕೆಗಳಲ್ಲಿ ತಮ್ಮ ಬರಹವನ್ನು ಹಂಚುತ್ತಿದ್ದರು. ಹಾಗೆಯೇ ಹಲವಾರು ಕೃತಿಗಳ ಸಹಾಯಕ ಸಂಪಾದಕಿ ಕೂಡ ಆಗಿದ್ದಾರೆ.ಮತ್ತು ಹಲವಾರು ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದಾರೆ.

'; } else { echo "Sorry! You are Blocked from seeing the Ads"; } ?>

ನವಪರ್ವ ಮಂಗಳೂರು ಘಟಕದ ಉಪಾಧ್ಯಕ್ಷರಾಗಿ, ವಿಶ್ವ ಕನ್ನಡ ಸಾಹಿತ್ಯ ಪರಿಷತ್ ನ ಮಹಿಳಾ ಅಧ್ಯಕ್ಷೆಯಾಗಿ, ಕನ್ನಡಿಗರ ವೇದಿಕೆಯಲ್ಲಿ ನಿರ್ಣಾಯಕರಾಗಿ ಕನ್ನಡಮ್ಮನ ಸೇವೆ ಮಾಡುತ್ತಿದ್ದಾರೆ.ಇದೆ ಸೆಪ್ಟೆಂಬರ್ 22 ರಂದು ನವಪರ್ವ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರಾದ ಮುರುಳೀಧರ್ ಕೆ ಎಸ್ ಹಾಗೂ ಮಾನಸಪ್ರವೀಣ್ ಭಟ್ ಇವರಿಬ್ಬರ ನೇತೃತ್ವದಲ್ಲಿ ಮೂಡಬಿದ್ರೆ ಸಮಾಜ ಮಂದಿರದಲ್ಲಿ ರಾಜ್ಯ ಮಟ್ಟದ ಕವಿ ಕಾವ್ಯ ಸಂಗಮ ನಡೆಯಿತು. ಹಲವಾರು ಕವಿಗಳನ್ನು ಪುರಸ್ಕರಿಸಲಾಯಿತು.

ಈ ಸಂದರ್ಭದಲ್ಲಿ ಮಂಗಳೂರು ಘಟಕದ ಉಪಾಧ್ಯಕ್ಷರಾದ ಮಾನಸ ಪ್ರವೀಣ್ ಭಟ್ ರವರಿಗೆ ನವಪರ್ವ ಫೌಂಡೇಶನ್ ಬೆಂಗಳೂರು ಘಟಕದ ಪರವಾಗಿ “ನವಪರ್ವ ನಕ್ಷತ್ರ” ಎಂಬ ಬಿರುದಿನೊಂದಿಗೆ ಸನ್ಮಾನಿಸಲಾಯಿತು.

'; } else { echo "Sorry! You are Blocked from seeing the Ads"; } ?>

ಇದೀಗ ಮಾನಸಪ್ರವೀಣ್ ಅವರ ಸಾಹಿತ್ಯ ಸಂಘಟನೆಯನ್ನು ಗುರುತಿಸಿ ಕಥಾ ಬಿಂದು ಪ್ರಕಾಶನ ಮಂಗಳೂರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕುಡ್ಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಯೋಗದಲ್ಲಿ ಖ್ಯಾತ ಕಾದಂಬರಿಗಾರರಾದ ಪಿ ವಿ ಪ್ರದೀಪ್ ಇವರ ನೇತೃತ್ವದಲ್ಲಿ ಕಥಾಬಿಂದು ಪ್ರಕಾಶನ 14 ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಏರ್ಪಡಿಸಿದ್ದು ಇಲ್ಲಿ ಅನೇಕ ಸಾಧಕರನ್ನು ಗುರುತಿಸಿ ವಿವಿಧ ಪ್ರಶಸ್ತಿಗಳೊಂದಿಗೆ ಗುರುತಿಸುತ್ತಿದ್ದಾರೆ. ವಿವಿಧ ಪ್ರಶಸ್ತಿಗಳಲ್ಲಿ ಒಂದಾದ ಸೌರಭ ರತ್ನ – 2021 ಪ್ರಶಸ್ತಿಗೆ ಬರಹಗಾರ್ತಿ ಸಂಘಟಕಿ ಆದ ಮಾನಸಪ್ರವೀಣ್ ಭಟ್ ಮಾಂಟ್ರಾಡಿ ಮೂಡಬಿದ್ರೆ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಕಥಾ ಬಿಂದು ಪ್ರಕಾಶನ ಸಂಸ್ಥಾಪಕರಾದ ಪಿ ವಿ ಪ್ರದೀಪ್ ಇವರು ತಿಳಿಸಿದ್ದಾರೆ.

ಪರಿಚಯ: ಮೂಲತಃ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೆಪಿ ನಗರ ನಿವಾಸಿ ಶ್ರೀಮತಿ ರತ್ನ ಮತ್ತು ಶ್ರೀ ದಿವಂಗತ ರವಿ ಇವರ ಮಗಳಾದ ಮಾನಸರವರು ಪತಿ ಪ್ರವೀಣ್ ಭಟ್ ಜೊತೆ ಮಂಗಳೂರಿನಲ್ಲಿ ನೆಲೆಸಿದ್ದಾರೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!