ಮಂಗಳೂರು, ಅ.13: ಚಿಕ್ಕಮಂಗಳೂರಿನ ಕುಟುಂಬವೊಂದು ಹೆರಿಗೆಗೆಂದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಬಂದಿತ್ತು. ಸಮಯದ ಮೊದಲೇ ಹೆರಿಗೆ ಆದ್ದರಿಂದ ಏಳು ತಿಂಗಳ ಮಗು ಮರಣ ಹೊಂದಿತ್ತು. ಈ ಕುಟುಂಬಸ್ಥರು ಪರವೂರಿನವರಾಗಿದ್ದರಿಂದ ಮಗುವಿನ ಅಂತ್ಯಸಂಸ್ಕಾರ ಮಾಡುವ ಬಗ್ಗೆ ಚಿಂತೆಗೀಡಾಗಿದ್ದರು.
ಆ ಕೂಡಲೇ ವಿಷಯ ಅರಿತ ದಕ್ಷಿಣ ಕನ್ನಡ ಜಿಲ್ಲಾ ಮಾನವ ಹಕ್ಕು ಅಧ್ಯಕ್ಷರಾದ ಇಕ್ಬಾಲ್ ರವರು, ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಮಗುವಿನ ಅಂತ್ಯಸಂಸ್ಕಾರ ಮಾಡಲು ನಾವು ತಯ್ಯಾರಿ ಮಾಡುತ್ತೇವೆ ಎಂದು ಭರವಸೆ ನೀಡುತ್ತಾರೆ. ನಂತರ ಇಕ್ಬಾಲ್ ರವರು, A1 ರಿಯಾಝ್ ಕಣ್ಣೂರು ರವರಿಗೆ ಕರೆ ಮಾಡಿ ವಿಷಯವನ್ನು ತಿಳಿಸುತ್ತಾರೆ. ತಕ್ಷಣ ಅವರು ಕಾರ್ಯಪ್ರವೃತ್ತರಾಗಿ ಸ್ನೇಹಿತ ಆಸಿಫ್ ಆಪತ್ಬಾಂಧವ, ಸುನಿಲ್ ಬಜಿಲಕೇರಿ, ಅಫ್ತಾಬ್ ಬಂದರ್ ರವರೊಂದಿಗೆ ನಂದಿಗುಡ್ಡೆ ಗೆ ಹೋಗಿ ಹಿಂದೂ ಸಂಪ್ರದಾಯದಂತೆ ಮಗುವನ್ನು ದಫನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಗುವಿನ ತಂದೆ ದರ್ಶನ್ ಶೆಟ್ಟಿ ಚಿಕ್ಕಮಂಗಳೂರು ಹಾಗೂ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು. ಜಾತಿ ಧರ್ಮದ ಎಳ್ಳೆ ಮೀರಿ, ಆಸ್ಪತ್ರೆಗೆ ದಾವಿಸಿ, ಕುಟುಂಬದವರಂತೆ ಜೊತೆನಿಂತು, ಮೃತಪಟ್ಟ ಪುಟ್ಟ ಮಗುವನ್ನು ಹಿಂದೂ ಧರ್ಮದ ವಿಧಿವಿಧಾನದಂತೆ ಅಂತ್ಯಸಂಸ್ಕಾರ ಮಾಡಲು ಸಹಕಾರಿಯಾದ ಈ ಮುಸ್ಲಿಂ ಸಹೋದರರು ಎಲ್ಲರ ಮನಸ್ಸು ಗೆದ್ದಿದ್ದಾರೆ.