ಕಂದಹಾರ್: ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ದಕ್ಷಿಣ ಆಫಘಾನಿಸ್ತಾನದ ಕಂದಹಾರ್‌ನಲ್ಲಿರುವ ಶಿಯಾ ಮಸೀದಿಯ ಮೇಲೆ ಆತ್ಮಾಹುತಿ ಬಾಂಬರ್ ದಾಳಿ ನಡೆದು, ಕನಿಷ್ಠ 33 ಜನರು ಸಾವನ್ನಪ್ಪಿ, 70ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಉತ್ತರ ನಗರದ ಕುಂಡುಜ್ ನ ಮಸೀದಿಯಲ್ಲಿ ಶಿಯಾ ಆರಾಧಕರ ಮೇಲೆ ಆತ್ಮಾಹುತಿ ದಾಳಿ ನಡೆದ ಒಂದು ವಾರದ ನಂತರ ಈ ದಾಳಿ ನಡೆದಿದೆ.
ಮಸೀದಿಯೊಳಗೆ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
“ಮೂವತ್ತಮೂರು ದೇಹಗಳು ಮತ್ತು 74 ಗಾಯಗೊಂಡ ಜನರನ್ನು ಇಲ್ಲಿಯವರೆಗೆ ನಮ್ಮ ಆಸ್ಪತ್ರೆಗೆ ತರಲಾಗಿದೆ ಎಂದು ನಗರದ ಕೇಂದ್ರ ಮಿರ್ವಾಯಿಸ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
“ನಮ್ಮ ಆಸ್ಪತ್ರೆಗೆ ಹಲವಾರು ಮೃತ ದೇಹಗಳು ಮತ್ತು ಗಾಯಗೊಂಡವರನ್ನು ಕರೆತರಲಾಗಿದೆ. ನಮಗೆ ತುರ್ತು ರಕ್ತದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಕಂದಹಾರ್ ನಗರದ ಮೊದಲ ಜಿಲ್ಲೆಯ ಶಿಯಾ ಬಂಧುಗಳ ಮಸೀದಿಯಲ್ಲಿ ಸ್ಫೋಟ ಸಂಭವಿಸಿರುವುದನ್ನು ತಿಳಿದು ನಾವು ದುಃಖಿತರಾಗಿದ್ದೇವೆ, ಇದರಲ್ಲಿ ನಮ್ಮ ದೇಶವಾಸಿಗಳು ಹುತಾತ್ಮರಾಗಿದ್ದಾರೆ ಮತ್ತು ಗಾಯಗೊಂಡಿದ್ದಾರೆ” ಎಂದು ತಾಲಿಬಾನ್ ಚಳವಳಿಯ ಆಂತರಿಕ ಸಚಿವಾಲಯದ ವಕ್ತಾರ ಕರಿ ಸೈಯದ್ ಖೋಸ್ತಿ ಟ್ವೀಟ್ ಮಾಡಿದ್ದಾರೆ.
Eyewitnesses said three back-to-back explosions hit Imam Bargah mosque in Kandahar, one of the biggest mosques in the city, causing high casualties.#TOLOnews pic.twitter.com/Z2owaWzxrF
— TOLOnews (@TOLOnews) October 15, 2021