ಸುಳ್ಯ: ಗೂನಡ್ಕ ಯುವಕರ ಟೀಮ್ ಅಡ್ಮಿನ್ಸ್ ತಂಡವು ಸತತ ನಾಲ್ಕನೇ ವರ್ಷ ಐಪಿಎಲ್ ಕ್ರಿಕೆಟ್ ಅಂಗವಾಗಿ ಐಪಿಎಲ್ ಪ್ರೆಡಿಕ್ಷನ್ ಎಂಬ ಪ್ರಶ್ನೊತ್ತರ ಕಾರ್ಯಕ್ರಮ ಹಮ್ಮಿಕೊಂಡು ಸುಮಾರು 100ರಷ್ಟು ದೇಶ ವಿದೇಶಗಳಲ್ಲಿ ಇರುವ ಯುವಕರನ್ನು ಸೇರಿಸಿ ಕಳೆದ ಕೆಲವು ತಿಂಗಳುಗಳಿಂದ ಯಶಸ್ವಿಯಾಗಿ ನಡೆಸಲಾಯಿತು.
ಐಪಿಎಲ್ ಪ್ರೆಡಿಕ್ಷನ್ 4 ವಿಜೇತರಾಗಿ 861 ಅಂಕಗಳೊಂದಿಗೆ ಸಿರಾಜುದ್ದೀನ್ ಕರಾವಳಿ ಮೊದಲ ಸ್ಥಾನ ಪಡೆದು 10,000 ಹಾಗು ಸ್ಮರಣಿಕೆಯನ್ನು ಪಡೆದುಕೊಂಡರು. 804 ಅಂಕಗಳೊಂದಿಗೆ ಸಾಜಿದ್ ಐ ಜಿ ಎರಡನೇ ಸ್ಥಾನ ಪಡೆದು 7,000 ಹಾಗು ಸ್ಮರಣಿಕೆಯನ್ನು ಪಡೆದುಕೊಂಡರು. 788 ಅಂಕಗಳೊಂದಿಗೆ ಅಜರುದ್ದೀನ್ ಗೂನಡ್ಕ ಮೂರನೇ ಸ್ಥಾನ ಪಡೆದು 4,000 ಹಾಗು ಸ್ಮರಣಿಕೆಯನ್ನು ಪಡೆದುಕೊಂಡರು.
787ಅಂಕಗಳೊಂದಿಗೆ ಝಹೀರ್ ಪೆರಾಜೆ ನಾಲ್ಕನೇ ಸ್ಥಾನ ಪಡೆದು 2,000 ಹಾಗು ಸ್ಮರಣಿಕೆಯನ್ನು ಪಡೆದುಕೊಂಡರು ಹಾಗು ಹಲವು ಸ್ಪರ್ಧಾರ್ಥಿಗಳು ವಿಶೇಷ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು ವಿಶೇಷವಾಗಿ ಎಲ್ಲಾ ವಿಜೇತರು ತಮಗೆ ಲಭಿಸಿದ ಬಹುಮಾನ ಮೊತ್ತವನ್ನು ಊರಿನಲ್ಲಿ ನಡೆಯಬೇಕಿರುವ ಬಡ ಹೆಣ್ಣು ಮಕ್ಕಳ ಮದುವೆಗೆ ಹಾಗೂ ಆಸ್ಪತ್ರೆಗಳಲ್ಲಿರುವ ಬಡ ಮಕ್ಕಳ ಚಿಕೆತ್ಸೆಗೆ ನೀಡಿ ಸಮಾಜಕ್ಕೆ ಮಾದರಿಯಾದರು.
ಐಪಿಎಲ್ ಪ್ರೆಡಿಕ್ಷನ್ 4 ಇದರ ಬಹುಮಾನ ಮೊತ್ತವನ್ನು ಸಿರಾಜ್ ಕರಾವಳಿ,ಶವಾದ್ ಗೂನಡ್ಕ,ರಿಫಾಯಿ ಪಟೇಲ್,ಅಬುಶಾಲಿ ಪಿ ಕೆ,ಶವಾದ್ ಕತಾರ್,RSD ಸೌದಿ ಅರೇಬಿಯಾ ನೀಡಿ ಸಹಕರಿಸಿದರು.ಐಪಿಎಲ್ ಪ್ರೆಡಿಕ್ಷನ್ ಆಯೋಜನೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಟೀಮ್ ಅಡ್ಮಿನ್ ಸದಸ್ಯರಾದ ಮುಸ್ತಫಾ ಪಾಂಡಿ,ಬದ್ರುದ್ದೀನ್ ಗೂನಡ್ಕ,ಅಜರುದ್ದೀನ್ ಗೂನಡ್ಕ,ಅಯ್ಯುಬ್ ಗೂನಡ್ಕ,ಸಿರಾಜುದ್ದೀನ್ ಗೂನಡ್ಕ ವಹಿಸಿಕೊಂಡರು ಮೀಡಿಯಾ ಪಾರ್ಟ್ನರ್ ಗಳಾದ B ಯುನೈಟೆಡ್, We Are One ವಾಟ್ಸಪ್ಪ್ ಗ್ರೂಪ್ ಹಾಗು ಇಜಾಝ್ ಗೂನಡ್ಕ ಸಂಪೂರ್ಣ ಸಹಕಾರ ನೀಡಿದರು.