ಕುಂಬ್ರ: ಮುಹಿಯದ್ದೀನ್ ಜುಮಾ ಮಸ್ಜಿದ್ ಶೇಖಮಲೆ ಇದರ ವತಿಯಿಂದ ಪೈಗಂಬರ್ ಸಲ್ಲಲ್ಲಾಹು ಅಲೈಹಿವಸಲ್ಲಂ ಅವರ 1496ನೇ ಜನ್ಮದಿನಾಚರಣೆಯ ಪ್ರಯುಕ್ತ ಮಸೀದಿಯಲ್ಲಿ ಮೌಲೂದ್ ಪಾರಾಯಣ ಕಾರ್ಯಕ್ರಮ ಇಂದು ನಡೆಯಿತು.
ಮಸೀದಿ ಖತೀಬರಾದ ಅಲ್ ಹಾಜಿ ಅಬ್ದುಲ್ ರಹಿಮಾನ್ ಬಾಖವಿ ಮಾತನಾಡಿ, ಶಾಂತಿದೂತರಾದ ಪ್ರವಾದಿಯವರ ಸಂದೇಶವನ್ನು ಸಾರುತ್ತಾ, ಪ್ರತೀ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುವ ಯಂಗ್ ಮೆನ್ಸ್ ಯುವಕರ ಕಾರ್ಯವನ್ನು ಶ್ಲಾಘಿಸಿದರು. ನಂತರ ಸೇರಿದ ಎಲ್ಲರ ಸಮ್ಮುಖದಲ್ಲಿ ಪ್ರಾರ್ಥನೆ ನೆರವೇರಿಸಿದರು.
ಶೇಖಮಲೆ ಮಸೀದಿ ಗೌರವಧ್ಯಕ್ಷರಾದ ಕೆ.ಪಿ ಆಕರ್ಷನ್ ಹಾಜಿ, ಜಮಾಅತ್ ಅಧ್ಯಕ್ಷರಾದ ಸಿದ್ದೀಕ್ ಹಾಜಿ, ಕಾರ್ಯದರ್ಶಿಯಾದ ಎಸ್ ಪಿ ಬಶೀರ್ ಶೇಖಮಲೆ ಹಾಗೂ ಮಸೀದಿ ಉಸ್ತಾದರು, ದರ್ಸ್ ವಿದ್ಯಾರ್ಥಿಗಳು, ಜಮಾಅತ್’ನ ಹಿರಿಯ ಮುಖಂಡರು, ಖಿದ್ಮತುದ್ದೀನ್ ಯಂಗ್ ಮೆನ್ಸ್ ಪದಾಧಿಕಾರಿಗಳು ಸೇರಿದಂತೆ ಊರಿನ ಹಿರಿಯರು, ಯುವಕರು ಹಾಗೂ ಮದ್ರಸ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಊರ ವ್ಯಾಪ್ತಿಯ ಪ್ರತೀ ಮನೆ ಮನೆಗೂ ಸೀರನಿ(ಊಟ) ಹಂಚಲಾಯಿತು.