';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಪ್ಪಿನಂಗಡಿ: ಸರಳಿಕಟ್ಟೆಯಲ್ಲಿ ಕಳ್ಳರ ಹಾವಳಿ ಮುಂದುವರೆದಿದ್ದು.ಸರಳಿಕಟ್ಟೆ ನಿವಾಸಿ ಉಸ್ಮಾನ್ ರವರ ತೋಟಕ್ಕೆ ನುಗ್ಗಿ ಅಡಿಕೆ ಕಳವು ನಡೆಸಿದ ಪ್ರಕರಣ ಇಂದು ಬೆಳಿಗ್ಗೆ ನಡೆದಿದೆ.ಸರಳಿಕಟ್ಟೆಯಲ್ಲಿ ಹತ್ತು ಪವನ್ ಚಿನ್ನ ಒಂದು ಲಕ್ಷ ಹಣ ಕಳವು ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕಳ್ಳತನ ನಡೆದಿದೆ.
ಅಡಿಕೆ ಕಳ್ಳತನ ನಡೆಸುವ ಸಮಯದಲ್ಲಿ ಮಾಲೀಕರ ಕಣ್ಣಿಗೆ ಬಿದ್ದಿದ್ದು ಸಾರ್ವಜನಿಕರು ಹಿಡಿದು ಅದೇ ಕಂಗುವಿನ ಮರಕ್ಕೆ ಕಟ್ಟಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.ಅಡಿಕೆ ಕಳ್ಳತನ ನಡೆಸಿದವನನ್ನು ಪುತ್ತೂರು ನಿವಾಸಿ ಕೇಶವಗೌಡ ಎಂದು ಎಂದು ಗುರುತಿಸಲಾಗಿದ್ದು ಆರೋಪಿ ಈಗ ಉಪ್ಪಿನಂಗಡಿ ಪೊಲೀಸ್ ಠಾಣೆಯ ಅತಿಥಿಯಾಗಿದ್ದಾನೆ.
ಸರಳಿಕಟ್ಟೆ ಉಸ್ಮಾನ್ ಇವರ ಮನೆಯಲ್ಲೇ ಈತ ತಿಂಗಳುಗಳ ಮುಂಚೆ ಕೆಲಸ ಮಾಡುತ್ತಿದ್ದ, ಪತ್ನಿಯ ಅನಾರೋಗ್ಯ ಸಮಯದಲ್ಲಿ ಮಾಲೀಕ ಉಸ್ಮಾನ್ ರವರು ಆಸ್ಪತ್ರೆ ಇನ್ನಿತರ ಖರ್ಚು ವೆಚ್ಚಗಳನ್ನು ಭರಿಸಿದ್ದರು, ಉಂಡ ಮನೆಗೆ ಕನ್ನ ಹಾಕಿದ ಆರೋಪಿಯನ್ನು ಬಂಧಿಸಿ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ.