ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೋವಿಡ್ ವಾರಿಯರ್ ಕರ್ನಾಟಕದ ಬಾಹುಬಲಿ ಖ್ಯಾತಿಯ ಲಯನ್ಸ್ ಡಾ! ಇ.ಕೆ.ಎ. ಸಿದ್ದೀಕ್ ಅಡ್ಡೂರು ರವರಿಗೆ ಕೊಡಗು ಬ್ಲಡ್ ಡೋನರ್ಸ್(ರಿ) ಕೊಡಗು ವತಿಯಿಂದ ಮಡಿಕೇರಿಯಲ್ಲಿ ಇಂದು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಬ್ಲಡ್ ಡೋನರ್ಸ್ (ರಿ) ಅಧ್ಯಕ್ಷರಾದ ಖಲೀಲ್ ವಹಿಸಿದ್ದರು.
ಸನ್ಮಾನಿತ ಡಾ. ಇ.ಕೆ.ಎ.ಸಿದ್ದೀಕ್ ಅಡ್ಡೂರು ಮಾತನಾಡಿ ಸಮಾಜದಲ್ಲಿ ಅದೆಷ್ಟೋ ಬಡ ರೋಗಿಗಳಿಗೆ ತುರ್ತು ರಕ್ತ ಪೂರೈಸುವಲ್ಲಿ ಕೊಡಗು ಬ್ಲಡ್ ಡೋನರ್ಸ್ ಯಶಸ್ವಿಯಾಗಿದೆ. ನಿಮ್ಮ ಈ ಒಂದು ಮಹತ್ತರವಾದ ಕಾರ್ಯವೂ ಇನ್ನಷ್ಟು ಮುಂದುವರಿಯಲಿ ಎಂದು ಶುಭ ಹಾರೈಸಿದರು. ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ತಾನು ಮಾಡಿದ ಸೇವೆಯನ್ನು ಗುರುತಿಸಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ನೀಡುವ ಗೌರವ ಪ್ರಶಸ್ತಿಯನ್ನು ನಾಳೆ ಮಡಿಕೇರಿಯ ಕಾವೇರಿ ಸಭಾಂಗಣದಲ್ಲಿ ಸ್ವೀಕರಿಸಲಿದ್ದೇನೆ ಎಂದರು.
ತನ್ನನ್ನು ಗುರುತಿಸಿ ಸನ್ಮಾನಿಸಿದ ಕೊಡಗು ಬ್ಲಡ್ ಡೋನರ್ಸ್ (ರಿ) ತಂಡಕ್ಕೆ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ಬ್ಲಡ್ ಡೋನರ್ಸ್ ಉಪಾಧ್ಯಕ್ಷರಾದ ಮೈಕಲ್ ವೇಗಸ್, ಕಾರ್ಯದರ್ಶಿಯಾದ ಮನ್ಸೂರ್ ಮತ್ತು ಪದಾಧಿಕಾರಿಗಳಾದ ಅಶ್ರಫ್, ಬಶೀರ್ ಮೊದಲಾದವರು ಉಪಸ್ಥಿತರಿದ್ದರು.