dtvkannada

'; } else { echo "Sorry! You are Blocked from seeing the Ads"; } ?>

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ಹೋಬರ್ಟ್‌ನಲ್ಲಿ ನಡೆದ ಕೊನೆಯ ಟೆಸ್ಟ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ 146 ರನ್‌ಗಳ ಭರ್ಜರಿ ಜಯ ಗಳಿಸಿದ್ದಾರೆ. ಆಸ್ಟ್ರೇಲಿಯನ್ ತಂಡವು ಅದ್ಭುತ ಪ್ರದರ್ಶನ ನೀಡಿ ಇಂಗ್ಲೆಂಡ್ ಅನ್ನು 4-0 ಅಂತರದಿಂದ ಸೋಲಿಸಿದೆ.

271 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 124 ರನ್‌ಗಳಿಗೆ ಆಲೌಟ್ ಆಯಿತು. ಆಶಸ್ ಸರಣಿಯನ್ನು ಗೆದ್ದ ನಂತರ, ಆಸ್ಟ್ರೇಲಿಯನ್ ತಂಡವು ಟ್ರೋಫಿಯನ್ನು ಪಡೆದ ತಕ್ಷಣ ಬಹಳ ಸಂಭ್ರಮಿಸಲು ಆರಂಭಿಸಿತು. ಆದರೆ ಆಸಿಸ್ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಮಾಡಿದ ಕೆಲಸಕ್ಕೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳು ಅವರಿಗೆ ಸೆಲ್ಯೂಟ್ ಮಾಡುತ್ತಿದ್ದಾರೆ. ಹಾಗಾದರೆ ಆಸಿಸ್ ನಾಯಕ ಮಾಡಿದ್ದೇನು ಗೊತ್ತಾ?

'; } else { echo "Sorry! You are Blocked from seeing the Ads"; } ?>

ವಾಸ್ತವವಾಗಿ, ಆಶಸ್ ಟ್ರೋಫಿಯನ್ನು ಸ್ವೀಕರಿಸಿದ ತಕ್ಷಣ, ಆಸ್ಟ್ರೇಲಿಯಾ ತಂಡವು ವೇದಿಕೆಯಲ್ಲಿ ಸಂಭ್ರಮಿಸಲು ಪ್ರಾರಂಭಿಸಿತು. ಈ ಸಂದರ್ಭದಲ್ಲಿ ಶಾಂಪೇನ್‌ನ ಸುರಿಮಳೆಯೂ ಆಯಿತು. ಆಸ್ಟ್ರೇಲಿಯ ತಂಡದ ಪ್ರತಿಯೊಬ್ಬ ಆಟಗಾರರು ವೇದಿಕೆಯಲ್ಲಿದ್ದರು ಆದರೆ ಉಸ್ಮಾನ್ ಖವಾಜಾ ಮಾತ್ರ ಇರಲಿಲ್ಲ. ವಾಸ್ತವವಾಗಿ ಉಸ್ಮಾನ್ ಖವಾಜಾ ಒಬ್ಬ ಮುಸ್ಲಿಂ ಆಗಿದ್ದು ಅವರು ಶಾಂಪೇನ್ ಆಚರಣೆಯಿಂದ ದೂರವಿರುತ್ತಾರೆ. ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮ್ಮಿನ್ಸ್ ಉಸ್ಮಾನ್ ಖವಾಜಾ ದೂರ ನಿಂತಿರುವುದನ್ನು ಕಂಡಾಗ, ಅವರು ತಮ್ಮ ಆಟಗಾರರನ್ನು ಶಾಂಪೇನ್ ಆಚರಣೆಯನ್ನು ನಿಲ್ಲಿಸುವಂತೆ ಹೇಳಿದರು. ನಂತರ ಉಸ್ಮಾನ್ ಖವಾಜಾ ಅವರನ್ನು ವೇದಿಕೆಗೆ ಕರೆದರು. ಪ್ಯಾಟ್ ಕಮಿನ್ಸ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

https://youtu.be/AbwWxCmTvws

ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಅದ್ಭುತ ಪ್ರದರ್ಶನ ನೀಡಿದೆ. ಮೊದಲ ಮೂರು ಪಂದ್ಯಗಳಲ್ಲಿಯೇ ಸರಣಿ ಕೈವಶ ಮಾಡಿಕೊಂಡಿದ್ದ ಆಸ್ಟ್ರೇಲಿಯ ತಂಡ ಐದನೇ ಹಾಗೂ ಕೊನೆಯ ಟೆಸ್ಟ್ ನಲ್ಲಿ ಇಂಗ್ಲೆಂಡ್ ತಂಡವನ್ನು 146 ರನ್ ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಟೆಸ್ಟ್ ಸರಣಿಯನ್ನು 4-0 ಅಂತರದಲ್ಲಿ ವಶಪಡಿಸಿಕೊಂಡಿದ್ದಾರೆ.

'; } else { echo "Sorry! You are Blocked from seeing the Ads"; } ?>

ಸಿಡ್ನಿಯಲ್ಲಿ 2 ಶತಕ ಸಿಡಿಸಿದ ಉಸ್ಮಾನ್ ಖವಾಜಾ ಸಿಡ್ನಿ ಟೆಸ್ಟ್‌ನಲ್ಲಿ ಉಸ್ಮಾನ್ ಖವಾಜಾ ಅದ್ಭುತ ಬ್ಯಾಟಿಂಗ್ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ. ಆ ಟೆಸ್ಟ್ ಡ್ರಾ ಆಗಿತ್ತು ಆದರೆ ಆ ಪಂದ್ಯದಲ್ಲಿ ಉಸ್ಮಾನ್ ಖವಾಜಾ ಅವರ ಬ್ಯಾಟಿಂಗ್ ಅತ್ಯುತ್ತಮವಾಗಿತ್ತು. ಟೆಸ್ಟ್ ತಂಡಕ್ಕೆ ಮರಳಿದ ಎಡಗೈ ಬ್ಯಾಟ್ಸ್‌ಮನ್ ಮೊದಲ ಇನ್ನಿಂಗ್ಸ್‌ನಲ್ಲಿ 137 ರನ್ ಗಳಿಸಿದರು. ಇಲ್ಲಿಗೆ ನಿಲ್ಲದ ಖವಾಜಾ ಎರಡನೇ ಇನ್ನಿಂಗ್ಸ್ನಲ್ಲೂ ಶತಕ ಬಾರಿಸಿದರು. ಖವಾಜಾ ಅಜೇಯ 101 ರನ್ ಗಳಿಸಿದರು.

https://twitter.com/buttsey888/status/1482675728470921220?
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!