dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಆದೇಶವನ್ನು ಮರುಪರಿಶೀಲಿಸಿ ಹಿಂಪಡೆಯುವಂತೆ ಆಗ್ರಹಿಸಿ ಪುತ್ತೂರು ಯುವ ಕಾಂಗ್ರೆಸ್ ವತಿಯಿಂದ ಪುತ್ತೂರು ತಾಲೂಕು ಮಿನಿ ವಿಧಾನ ಸೌಧದಲ್ಲಿ ಸಹಾಯಕ ಕಮೀಷನರ್ ಅವರಿಗೆ ಮನವಿ ನೀಡಲಾಯಿತು.



ನಂತರ ಮಾತನಾಡಿದ ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಪ್ರಸಾದ್ ಪಾಣಾಜೆ ನೈಟ್ ಕರ್ಫ್ಯೂ , ವೀಕೆಂಡ್ ಕರ್ಫ್ಯೂ ಅವೈಜ್ಞಾನಿಕವಾಗಿದ್ದು ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ ಹೊರತು ಕೊರೊನಾ ಹಿಮ್ಮೆಟ್ಟಿಸಲು ಸಹಕಾರಿಯಾಗದು ಎಂದು ತಿಳಿಸಿದರು.

ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಬ್ಯಾಂಕ್ ಸಾಲ ಪಡೆದು ವ್ಯವಹಾರ ಆರಂಭಿಸಿದವರ ಬದುಕು ಅತಂತ್ರವಾಗಿದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡವರು, ದೈವ ನರ್ತಕರು, ಚೆಂಡೆ ವಾದ್ಯ ನುಡಿಸುವವರು, ಅಡುಗೆಯವರು ಮನೆಯಲ್ಲೆ ಕೂರುವ ಪರಿಸ್ಥಿತಿ ಉಂಟಾಗುತ್ತಿದೆ. ಜಾತ್ರೆಗಳಲ್ಲಿ ಸಂತೆ ಇನ್ನಿತರ ವಸ್ತುಗಳ ಮಾರಾಟದಲ್ಲಿ ಬರುವ ಆದಾಯವನ್ನು ನಂಬಿಕೊಂಡವರು ಬೀದಿ ಪಾಲಾಗುತ್ತಿದ್ದಾರೆ.

'; } else { echo "Sorry! You are Blocked from seeing the Ads"; } ?>



ಕಲಾವಿದರ ಬದುಕು ಕೇಳುವವರಿಲ್ಲದಂತಾಗಿದೆ. ಬಸ್ಸು, ಟ್ಯಾಕ್ಸಿ, ಆಟೋ ಚಾಲಕರು , ಗ್ಯಾರೇಜು ಮಾಲಕರು, ಕಾರ್ಮಿಕರು ಆದಾಯವಿಲ್ಲದೆ ಕಣ್ಣೀರು ಸುರಿಸುತ್ತಿದ್ದಾರೆ. ಶಾಲೆ ಮುಚ್ಚುವುದರಿಂದ ಒಂದು ವರ್ಗದ ಮಕ್ಕಳಲ್ಲಿ ಅನಕ್ಷರತೆಯ ಭಯ ಕಾಡುತ್ತಿದೆ. ಅತಿಥಿ ಶಿಕ್ಷಕರು, ಖಾಸಾಗಿ ಶಾಲಾ ಶಿಕ್ಷಕರು ಬೇರೆ ಕೆಲಸದತ್ತ ಮುಖ ಮಾಡುತ್ತಿದ್ದಾರೆ. ಹೋಟೆಲ್ ಉದ್ಯಮಗಳು ಮುಚ್ಚುತ್ತಿರುವುದರಿಂದ ಅನೇಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ.ಎಲ್ಲಾ ಧರ್ಮದ ಧಾರ್ಮಿಕ ಭಾವನೆಗೆ ಬಲವಾದ ಪೆಟ್ಟು ಬೀಳತ್ತಿದೆ. ವರ್ತಕರು ಸಂಕಷ್ಟದಲ್ಲಿದ್ದಾರೆ. ಬಾಡಿಗೆ ಕಟ್ಟಲಾಗದೆ ಅನೇಕ ಕುಟುಂಬಗಳು ಸಾಲ ಭಾಧೆಯಿಂದ ಬಳಲುತ್ತಿದ್ದಾರೆ.

ಇಂತಹ ಗಂಭೀರ ಪರಿಸ್ಥಿಯನ್ನು ಅರಿತುಕೊಂಡು ಸರಕಾರವು ನೈಟ್ ಕರ್ಫ್ಯೂ ಹಿಂಪಡೆದು ವೈದ್ಯಕೀಯ ಸೌಲಭ್ಯ ಹೆಚ್ಚಿಸುವ ಮುಖಾಂತರ ಕಾರ್ಯಪ್ರವೃತ್ತರಾಗಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪುತ್ತೂರು ನಗರ ಯುವಕಾಂಗ್ರೆಸ್ ಅಧ್ಯಕ್ಷರಾದ ಮೋನು ಬಪ್ಪಳಿಗೆ, ಪುತ್ತೂರು ಬ್ಲಾಕ್ ಯುವಕಾಂಗ್ರೆಸ್ ಉಪಾಧ್ಯಕ್ಷರಾದ ಹನೀಫ್ ಪುಂಚತ್ತಾರ್, ಸುಮಿತ್ರ ಪುರುಷರಕಟ್ಟೆ, ಪ್ರ.ಕಾರ್ಯದರ್ಶಿಗಳಾದ ಕಮಲೇಶ್ ಸರ್ವೇದೋಳಗುತ್ತು, ರಶೀದ್ ಮುರ, ರವೂಫ್ ಸಾಲ್ಮರ, ಅಭಿಷೇಕ್ ಆಚಾರ್ಯ, ಶಮೀಮ್ ಗಾಳಿಮುಖ, ಶ್ರೀಮತಿ ರೇಖಾ ಸಾಲ್ಮರ ನಗರ ಯುವಕಾಂಗ್ರೆಸ್ ಉಪಾಧ್ಯಕ್ಷರಾದ ಅಖಿಲ್ ಸಾಮೆತ್ತಡ್ಕ, ಪ್ರ.ಕಾರ್ಯದರ್ಶಿಯಾದ ತವೀದ್ ಸಾಲ್ಮರ ಹಾಗೂ ಯುವನಾಯಕರಾದ ಜಗದೀಶ್ ಕಜೆ, ಸಾದಿಕ್ ನೀರಕಟ್ಟೆ, ಸದಾನಂದ ಭರಣ್ಯ, ಜಲೀಲ್ ಬಲ್ನಾಡ್, ಕಾಂತಿ ಪ್ರಕಾಶ್ ಡಿ. ಸೋಝ , ಎಂ.ಎ ಅಬ್ದುಲ್ ಕುಂಞ, ಸುನೈಫ್ ಗಾಳಿಮುಖ ಮತ್ತಿತರರು ಉಪಸ್ಥಿತರಿದ್ದರು.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!