ಮಂಗಳೂರು: ಅನಾಮಧೇಯ ಕರೆಯೊಂದರಿಂದ ಮನೆ ಕಟ್ಟಲು ಹಣ ನೀಡುವುದಾಗಿ ಮತ್ತು ಗಿಫ್ಟ್ ಕಳುಹಿಸುವುದಾಗಿ ಆಮಿಷವೊಡ್ಡಿ ರೂ 2.92 ಲಕ್ಷ ರೂ. ವಂಚನೆ ಮಾಡಿದ ಪ್ರಕರಣ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ವ್ಯಕ್ತಿಯೊಬ್ಬರಿಗೆ ವಿದೇಶಿ ನಂಬರ್ನಿಂದ ವಾಟ್ಸ್ಆ್ಯಪ್ ಮೆಸೇಜ್ ಮಾಡಿ ಮನೆ ಕಟ್ಟಲು ಹಣ ನೀಡುವುದಾಗಿ ಮತ್ತು ಗಿಫ್ಟ್ ಕಳುಹಿಸುವುದಾಗಿ ತಿಳಿಸಿದ್ದ.
ಪದೇ ಪದೆ ಮೆಸೇಜ್ ಕಳುಹಿಸಿದ ಬಳಿಕ ಅದೇ ವ್ಯಕ್ತಿ ಕರೆ ಮಾಡಿ ಗಿಫ್ಟ್ ದೆಹಲಿಗೆ ಬಂದಿದೆ. ಅದನ್ನು ಮಂಗಳೂರಿಗೆ ಕಳುಹಿಸಲು 35 ಸಾವಿರ ರೂ. ಕಳುಹಿಸುವಂತೆ ತಿಳಿಸಿದ್ದಾನೆ.
ಆರೋಪಿ ಮಾತು ನಂಬಿದ ವ್ಯಕ್ತಿ 35 ಸಾವಿರ ರೂ.ಗಳನ್ನು ಆ ವ್ಯಕ್ತಿಯ ನಂಬರ್ಗೆ ಗೂಗಲ್ ಪೇ ಮಾಡಿದ್ದಾರೆ. ಬಳಿಕ ಅದೇ ವ್ಯಕ್ತಿ ಮತ್ತೆ 97,000 ಪಾವತಿಸುವಂತೆ ತಿಳಿಸಿದ್ದಾರೆ.
ಅದರಂತೆ ರೂ. 97 ಸಾವಿರ ಮತ್ತು 1.60 ಲಕ್ಷ ರೂಗಳನ್ನು ಸೆಫ್ಟ್ ಮೂಲಕ ಪಾವತಿಸಿದ್ದಾರೆ. ಹೀಗೆ ಒಟ್ಟು ರೂ 2,92,000 ಪಾವತಿಸಿದ ಬಳಿಕ ಮಂಗಳೂರಿನ ವ್ಯಕ್ತಿಗೆ ವಂಚನೆಯ ಅರಿವಾಗಿದ್ದು, ಈ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆಂದು ತಿಳಿದು ಬಂದಿದೆ.