ಕಲಾಯಿ: ಫ್ಯಾಶಿಸ್ಟರ ಹಿಡಿತದಿಂದ ಗಣರಾಜ್ಯವನ್ನು ಉಳಿಸಲು ನಾವು ಒಂದಾಗೋಣ ಎಂಬ ಧ್ಯೇಯದೊಂದಿಗೆ 73 ನೇ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಕಲಾಯಿ ಜಂಕ್ಷನ್ ನಲ್ಲಿ ನಡೆಯಿತು.
ಧ್ವಜಾರೋಹಣವನ್ನು
ಕಲಾಯಿ ಬೂತ್ ಅಧ್ಯಕ್ಷರಾದ ಯಾಕುಬ್ ನೆರವೇರಿಸಿದರು ಪ್ರಾಸ್ತಾವಿಕವಾಗಿ ನೌಶದ್ ಕಲಾಯಿ ಮಾತನಾಡಿ ಸ್ವಾಗತ ಭಾಷಣವನ್ನು ಮಾಡಿದರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸದಸ್ಯರಾದ ಅನ್ವರ್ ಬಡಕಬೈಲ್ ನಮ್ಮ ದೇಶದ ನಿಜವಾದ ಅರ್ಥ ಸ್ಥಾನಮಾನ ಪ್ರತಿಷ್ಠೆ ಮತ್ತು ಮುಖ್ಯವಾಗಿ ಮಾನವೀಯತೆಯ ಸಂಸ್ಕೃತಿಯನ್ನು ಕಾಪಾಡಲು ನಾವು ಪ್ರತಿಜ್ಞೆ ಮಾಡಬೇಕಾದ ಅತ್ಯುತ್ತಮ ದಿನ ಇಂದು ನಮ್ಮ ನಾಡಿನ ಮಹಾವೀರರು ನಮಗೆ ಸ್ವಾತಂತ್ರ್ಯ ನೀಡಿ ಸಂವಿಧಾನ ರೂಪಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮದೀನಾ ಜುಮ್ಮಾ ಮಸೀದಿ ಕಲಾಯಿ ಇದರ ಕೋಶಾಧಿಕಾರಿ
ಉಸ್ಮಾನ್ HIWEC ಕಲಾಯಿ ಉಪಾಧ್ಯಕ್ಷರಾದ ಜಲೀಲ್ GCC ಇದರ ಸದಸ್ಯರಾದ ಅಸ್ಬಾಕ್ ಹಾಗೂ KM ಮಹಮ್ಮದ್ ಉಪಸ್ಥಿತರಿದ್ದರು ಅಜರುದ್ದೀನ್ ಕಲಾಯಿ ವಂದಿಸಿದರು