dtvkannada

'; } else { echo "Sorry! You are Blocked from seeing the Ads"; } ?>

ಉಡುಪಿ: ಹಿಜಾಬ್ ವಿವಾದ ಹಿನ್ನೆಲೆ ಶಾಲೆಗಳಿಗೆ ರಜೆ ನೀಡಲಾಗಿತ್ತು. ಸದ್ಯ ಈಗ ರಾಜ್ಯದಲ್ಲಿ ನಾಳೆಯಿಂದ ಪ್ರೌಢಶಾಲೆ ಪುನಾರಂಭಗೊಳ್ಳಲಿದೆ. ಮೊದಲ ಹಂತದಲ್ಲಿ 10ನೇ ತರಗತಿವರೆಗೆ ಶಾಲೆ ಆರಂಭವಾಗಲಿದೆ. ಸದ್ಯ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಫೆಬ್ರವರಿ 12ರಿಂದ 19ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಉಡುಪಿ ಡಿಸಿ ಕೂರ್ಮರಾವ್ ಆದೇಶ ಹೊರಡಿಸಿದ್ದಾರೆ. ಶಾಲೆಯ ಸುತ್ತಮುತ್ತ ಗುಂಪು ಸೇರುವಂತಿಲ್ಲ. ಪ್ರತಿಭಟನೆ, ಮೆರವಣಿಗೆಗೆ ಅವಕಾಶ ಇಲ್ಲ. ಯಾವುದೇ ವ್ಯಕ್ತಿ ಜಾತಿ ಧರ್ಮಕ್ಕೆ ನೈತಿಕತೆ ವಿರುದ್ಧ ನಡೆದುಕೊಳ್ಳುವಂತಿಲ್ಲ ಎಂದು ಆದೇಶಿಸಲಾಗಿದೆ.

'; } else { echo "Sorry! You are Blocked from seeing the Ads"; } ?>

ಮತ್ತೊಂದು ಕಡೆ ನಾಳೆಯಿಂದ ಫ್ರೌಡ ಶಾಲೆಗಳನ್ನ ಆರಂಭಿಸುವ ಬಗ್ಗೆ ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳು, ಶಾಲಾಡಳಿತ ಮಂಡಳಿಗಳಿಗೆ ಶಾಂತಿ ಸಭೆ ಮಾಡಲು ತಿಳಿಸಿದ್ದೇನೆ. ನಾಳೆ ಶಾಂತಿಯುತ ಎಲ್ಲಾ ತರಗತಿಗಳು ನಡೆಯುತ್ತವೆ. ಅದನ್ನ ನೋಡಿಕೊಂಡು ಕಾಲೇಜುಗಳ ಆರಂಭದ ಬಗ್ಗೆ ನಿರ್ಧರಿಸುತ್ತೇವೆ. ಎರಡೂ ವರ್ಷದಲ್ಲಿ ಆರ್ಥಿಕತೆ ಬಹಳ ನಷ್ಟ ಆಗಿದೆ. ಈ ಬಜೆಟ್ ನಲ್ಲಿ ಅದಕ್ಕೆ ಬೂಸ್ಟ್ ಕೊಡೋ ಪ್ರಯತ್ನ ಮಾಡುತ್ತೇವೆ. ಶಾಲಾ ಕಾಲೇಜುಗಳನ್ನ ಆರಂಭಿಸೋದು ನಮ್ಮ ಮೊದಲ ಆಧ್ಯತೆ. ಮೊದಲಿನ ಹಾಗೇ ಸೌರ್ಹದಯುತವಾಗಿ ಶಾಲಾ ಕಾಲೇಜುಗಳನ್ನ ಆರಂಭಿಸುತ್ತೇವೆ. ಯಾರು ಪ್ರಚೋದನೆ ನೀಡ್ತಾರೆ, ಸೋಷಿಯಲ್ ಮೀಡಿಯಾದಲ್ಲಿ ಸಂದೇಶವನ್ನ ಹಾಕ್ತಾರೆ ಅವೆಲ್ಲವನ್ನೂ ನಮ್ಮ ಅಧಿಕಾರಿಗಳು ಗಮನಿಸುತ್ತಾರೆ ಎಂದು ತಿಳಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!