dtvkannada

'; } else { echo "Sorry! You are Blocked from seeing the Ads"; } ?>

ಕಳೆದ ಎಂಟು ವರ್ಷಗಳಿಂದ ಶೈಕ್ಷಣಿಕ ಮತ್ತು ಸಾಮಾಜಿಕ ರಂಗದಲ್ಲಿ ಕಾರ್ಯಾಚರಿಸುತ್ತಿರುವ ಶರಫುದ್ದೀನ್ ಸಅದಿ ಉಸ್ತಾದರ ಹಳೆ ವಿದ್ಯಾರ್ಥಿ ಸಂಘಟನೆಯಾದ ಲಜ್ನತು ಮಸಾಇದತಿತ್ತಅಲೀಂ ಇದರ ನೂತನ ಸಮಿತಿ ಅಸ್ತಿತ್ವಕ್ಕೆ ಬಂದು ಸರಳಿಕಟ್ಟೆ ಉಪ ಮುದರ್ರಿಸ್ ಶುಹೈಬ್ ಸಅದಿ ಕರಾಯ ಅಧ್ಯಕ್ಷರಾಗಿ ಪುನರಾಯ್ಕೆಗೊಂಡರು.

ಶರಫುದ್ದೀನ್ ಸಅದಿಯವರ ಅಧ್ಯಕ್ಷತೆಯಲ್ಲಿ ಗಾಂಧೀನಗರ ಸುಳ್ಯ ಬದ್ರಿಯಾ ಜುಮಾ ಮಸ್ಜಿದ್ ನಲ್ಲಿ ನಡೆದ YUVA2K22 ಕಾರ್ಯಕ್ರಮವನ್ನು ಬಿಜೆಎಂ ಖತೀಬ್ ಅಶ್ರಫ್ ಸಖಾಫಿ ಅಲ್ ಕಾಮಿಲ್ ಉದ್ಘಾಟಿಸಿದರು ಮತ್ತು ಶರ್ವಾನಿ ರಝ್ವಿ ಪ್ರಾಸ್ತಾವಿಕ ಭಾಷಣ ನಡೆಸಿದರು.

'; } else { echo "Sorry! You are Blocked from seeing the Ads"; } ?>

ಲಜ್ನತ್ ಸಂಘಟನಾ ಕಾರ್ಯದರ್ಶಿಯಾಗಿ ಫಾರೂಖ್ ಸಅದಿ ಕುಪ್ಪೆಟ್ಟಿ ಮತ್ತು ಫೈನಾನ್ಸ್ ಸೆಕ್ರಟರಿ ಆಗಿ ರಝಾಕ್ ಹನೀಫಿ ಅಡ್ಯಾರ್ ಪದವು ಆಯ್ಕೆಯಾದರು.ಉಪಾಧ್ಯಕ್ಷರಾಗಿ ನುಅಮಾನ್ ಸಖಾಫಿ ಮಡಂತ್ಯಾರ್,ಹಬೀಬ್ ಮುಡಿಪು ಹಾಗೂ ಕಾರ್ಯದರ್ಶಿಗಳಾಗಿ ಗುರುವಾಯನಕೆರೆ ದರ್ಗಾ ವ್ಯವಸ್ಥಾಪಕಾರದ ಇರ್ಶಾದ್ ಮುಸ್ಲಿಯಾರ್ ಪೆರೋಡಿತ್ತಾಯಕಟ್ಟೆ ಮತ್ತು ಇರ್ಶಾದ್ ಸಅದಿ ಕಕ್ಕೆಪದವು ಅಯ್ಕೆಯಾದರು.ವರ್ಕಿಂಗ್ ಕಮಿಟಿ ಚೇರ್ಮೇನ್ ಆಗಿ ನೌಶಾದ್ ಮದನಿ ಅಡ್ಯಾರ್ ಪದವು ಕನ್ವೀನರ್ ಜಅಫರ್ ಹನೀಫಿ, ಟ್ರೆಸರರ್ ಆಸೀಫ್ ಸಅದಿ ಅಡ್ಯಾರ್ ಪದವು ಮತ್ತು ಪಬ್ಲಿಷಿಂಗ್ ಬ್ಯೂರೋ ಸಫ್ವಾನ್ ಸಅದಿ ಅಳಕೆ ಹಾಗೂ ಮುರ್ಷಿದ್ ಹಾಶಿಮಿ ಲಾಡಿ ಅವರನ್ನು ನೇಮಕ ಮಾಡಲಾಯಿತು.

ವಿದ್ಯಾರ್ಥಿಗಳ ಶೈಕ್ಷಣಿಕ ಖರ್ಚಿಗೆ ನೀಡುತ್ತಾ ಬಂದಿರುವ ಆರ್ಥಿಕ ಸಹಾಯವನ್ನು ಮುಂದಿನ ದಿನಗಳಲ್ಲಿ ಇಮ್ಮಡಿಗೊಳಿಸಬೇಕು ಮತ್ತು ಆರ್ಥಿಕವಾಗಿ ಹಿಂದುಳಿದ ಇನ್ನೂ ಅಧಿಕ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ತೀರ್ಮಾನಿಸಲಾಯ್ತು. ಗಾಂಧೀನಗರ ಸುಳ್ಯ ವುಮೆನ್ಸ್ ಕಾಲೇಜ್ ಪ್ರಿನ್ಸಿಪಾಲ್ ಶೌಕತ್ತಲಿ ಅಮಾನಿ ,ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷರಾದ ಮುಸ್ತಫಾ ಹಾಜಿ ಸೇರಿದಂತೆ ಇನ್ನಿತರ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಲುಖ್ಮಾನ್ ಸಅದಿ ಕಾರ್ಯಕ್ರಮ ನಿರೂಪಣೆ ಮಾಡಿದರು ಜಅಫರ್ ಹನೀಫಿ ಧನ್ಯವಾದ ಸಲ್ಲಿಸಿದರು.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!