ದುಬೈ: ಯುಎಇ ಸೆಂಟ್ರಲ್ ಬ್ಯಾಂಕ್ ಹೊಸ ಕರೆನ್ಸಿ ನೋಟುಗಳನ್ನು ನಿನ್ನೆ ಬಿಡುಗಡೆ ಮಾಡಿದ್ದು ಐದು ಮತ್ತು ಹತ್ತು ದಿರ್ಹಂಸ್ ನೋಟುಗಳಾಗಿವೆ.
ಹಳೆಯ ಪೇಪರ್ ನೋಟುಗಳ ಬದಲಾಗಿ ದೀರ್ಘಕಾಲಿಕ ಬಾಳಿಕೆ ಬರುವ ಪೋಲಿಮರ್ ಪ್ಲಾಸ್ಟಿಕ್ ಉತ್ಪನ್ನದಿಂದ ಹೊಸ ಕರೆನ್ಸಿ ನೋಟುಗಳನ್ನು ರೂಪಿಸಿದೆಯೆಂದು ವರದಿಯಾಗಿದೆ.
ಈ ಹಿಂದೆ ರಾಷ್ಟ್ರೀಯ ದಿನಾಚರಣೆ ಅಂಗವಾಗಿ ಡಿಸೆಂಬರ್ 2 ರಂದು ಹೊಸ 50 ರ ನೋಟನ್ನು ಬಿಡುಗಡೆ ಮಾಡಿದ್ದು ಶೇಖ್ ಝಾಯೇದ್ ಅಲ್‌ನಹ್ಯಾನ್ ರ ರೇಖಾಚಿತ್ರವನ್ನೊಳಗೊಂಡ ಅದೇ ಮಾದರಿಯಲ್ಲಿ ಐದು ಮತ್ತು ಹತ್ತರ ನೋಟನ್ನು ವಿನ್ಯಾಸ ಮಾಡಲಾಗಿದೆ.
ಯುಎಇ ಯ ಪುರಾತನ ಇತಿಹಾಸವನ್ನು ಸಾರಿ ಹೇಳುವ ಅಜ್ಮಾನ್ ಮತ್ತು ರಾಸಲ್ ಕೈಮಾದ ಕೋಟೆಗಳ ಚಿತ್ರಗಳನ್ನು ವಿನ್ಯಾಸಗೊಳಿಸಿದ್ದು ಹತ್ತು ದಿರ್ಹಂಸ್‌ನ ನೋಟಿನಲ್ಲಿ ಅಬುಧಾಬಿಯ ಶೇಖ್ ಝಾಯೇದ್ ಮಸ್ಜಿದ್ ಮತ್ತು ಖೊರ್ಫು ಖಾನ್ ಆಂಪಿ ಥಿಯೇಟರಿನ ಚಿತ್ರವನ್ನು ಸೇರಿಸಲಾಗಿದೆ.
ನಕಲಿ ನೋಟುಗಳ ಹಾವಳಿಯಿಂದ ತಪ್ಪಿಸಲು ಹೆಚ್ಚಿನ ಸುರಕ್ಷಾ ಕ್ರಮಗಳೊಂದಿಗೆ ನಿರ್ಮಿಸಲಾಗಿದೆಯೆಂದು ತಿಳಿದು ಬಂದಿದೆ.
ವರದಿ: ಸಫ್ವಾನ್ ಚಿಗುರೆಲೆ ಕೂರತ್