ಮಂಗಳೂರು: MNG ಪೌಂಡೇಶನ್ (ರಿ) ಸಂಸ್ಥೆಯ ವತಿಯಿಂದ ದಾನಿಗಳಿಂದ ಸಂಗ್ರಹಿಸಿದ ಸುಮಾರು 600ಕ್ಕೂ ಅಧಿಕ ರಮಳಾನ್ ಕಿಟ್, 150 ನಮಾಝ್ ವಸ್ತ್ರ ಹಾಗೂ 50 ಕುರ್’ಆನ್ ಗ್ರಂಥವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬಡ ಕುಟುಂಬಗಳು ಹಾಗೂ ಯತೀಂ ಕುಟುಂಬಗಳನ್ನು ಗುರುತಿಸಿ ನೀಡಲಾಯಿತು.
ದಾನಿಗಳ ಸಹಾಯದಿಂದ ಸಂಗ್ರಹಸಿದ ರಮದಾನ್ ಕಿಟ್ ಅನ್ನು ಸಂಸ್ಥೆಯ ಪದಾಧಿಕಾರಿಗಳು, ಬಡ ಅರ್ಹ ಜನರ ಮನೆಮನೆಗೆ ಭೇಟಿ ನೀಡಿ ವಿತರಿಸಿದರು.
ಇ-ಫೌಂಡೇಶನ್ ಇಂಡಿಯಾ ವತಿಯಿಂದ ಇಫ್ತಾರ್ ಮತ್ತು ಸಹರಿ ವ್ಯವಸ್ಥೆ: ಪುತ್ತೂರು ಆಸುಪಾಸಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಮತ್ತು ರೋಗಿಗಳ ಜೊತೆ ತಂಗುವ ಸುಮಾರು 2140 ಮಂದಿಗೆ ಪವಿತ್ರ ರಂಝಾನಿನ 1 ತಿಂಗಳು ಉಚಿತ ಇಫ್ತಾರ್ ಮತ್ತು ಸಹರಿ ವ್ಯವಸ್ಥೆಯನ್ನು ಇ ಫೌಂಡೇಶನ್ ಇಂಡಿಯಾ(ರಿ) ಸಂಸ್ಥೆಯ ವತಿಯಿಂದ ಅಚ್ಚುಕಟ್ಟಾಗಿ ಮಾಡಲಾಯಿತು.
ಈ ಎರಡೂ ಸಂಸ್ಥೆಯ ಕಾರ್ಯವೈಕರಿಗೆ ಮೆಚ್ಚುಗೆ ಸೂಚಿಸಿ ಪತ್ರಿಕಾ ಹೇಳಿಕೆ ನೀಡಿದ ಉದ್ಯಮಿ ಅಲಿ ಪರ್ಲಡ್ಕ ರವರು, ಜನರ ಹಸಿವನ್ನು ನೀಗಿಸುವ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಎಮ್.ಎನ್.ಜಿ ಫೌಂಡೇಶನ್(ರಿ) ಹಾಗೂ ಕಳೆದ ಒಂದು ತಿಂಗಳು ಆಸ್ಪತ್ರೆಯಲ್ಲಿ ರೋಗಿಗಳಿಗೆ ಇಫ್ತಾರ್ ಮತ್ತು ಸಹರಿ ವ್ಯವಸ್ಥೆ ಮಾಡಿದ ಇ- ಫೌಂಡೇಶನ್ ಇಂಡಿಯಾ(ರಿ) ಸಂಸ್ಥೆಯ ಕಾರ್ಯನಿರ್ವಾಹಕರ ಕೆಲಸ ಕಾರ್ಯಗಳು ಶ್ಲಾಘನೀಯವಾದದ್ದು. ಇವರ ಇಂತಹ ಮಾನವೀಯ ಸೇವೆಗಳು ಇನ್ನಷ್ಟು ಅಧಿಕವಾಗಲಿ ಎಂದರು. ಜೊತೆಗೆ ಈ ಎರಡು ಸಂಸ್ಥೆಗೆ ಸಹಾಯ ನೀಡಿ ಸಹಕರಿಸಿದ ಸರ್ವ ದಾನಿಗಳಿಗೂ, ಹಿತೈಷಿಗಳಿಗೂ ದೇವರು ಒಳಿತನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.