dtvkannada

ಮಂಗಳೂರು: ಸಮಸ್ತ ಅಧೀನದಲ್ಲಿ ನಡೆದ ಪಬ್ಲಿಕ್ ಪರೀಕ್ಷೆಗಳಲ್ಲಿ ಮತ್ತು ಪ್ರತಿಭಾ ಸ್ಪರ್ಧೆಗಲ್ಲಿ ಉತ್ತಮ ಸಾಧನೆಗೈದ ಮನಾರುಲ್ ಹುದಾ ಮದ್ರಸ, ಗ್ರೀನ್ ಗ್ರೌಂಡ್, ದೇರಳಕಟ್ಟೆ ಇದರ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಅಭಿನಂದಿಸುವ ಕಾರ್ಯಕ್ರಮವು ರಂಝಾನ್ 27 ರ ರಾತ್ರಿ ಮಸೀದಿ ಸಭಾಂಗಣದಲ್ಲಿ ಜರುಗಿತು.

ಎಸ್.ಕೆ.ಐ.ಎಂ.ವಿ.ಬಿ ಅಧೀನದಲ್ಲಿ 2021-22 ರ ಸಾಲಿನ 10 ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಟಾಪ್ ಪ್ಲಸ್ ( ಅಂಕ 400 ರಲ್ಲಿ 395 ) ಸ್ಥಾನ ಪಡೆದ ವಿದ್ಯಾರ್ಥಿ ಮಹಮ್ಮದ್ ಆಶಿಕ್ , ಇದೇ ತರಗತಿಯಲ್ಲಿ ಡಿಸ್ಟಿಂಕ್ಷನ್ ಸ್ಥಾನ ಪಡೆದ ಆಯಿಷಾ ನಿಶಾನಾ , ಹಯ್ಯಾನ್ ಅಕ್ತರ್, 2020-2021 ನೇ ಸಾಲಿನ 7ನೇ ತರಗತಿಯ ಪರೀಕ್ಷೆಯಲ್ಲಿ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ಸಮಸ್ತ ಮುಸಾಅಬ ಕಾರ್ಯಕ್ರಮದಲ್ಲಿ ಖಿರಾಅತ್ ಪಠಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅಹಮ್ಮದ್ ಮುಫೀಝ್ ಮತ್ತು 7ನೇ ತರಗತಿಯಲ್ಲಿ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಅಹಮ್ಮದ್ ಝಾಈನ್ ಮಂಚಿ, ಸಮಸ್ತ ಜಿಲ್ಲಾ ಮಟ್ಟದ ಮುಸಾಅಬ ಕಾರ್ಯಕ್ರಮದ ಪಾಡಿಪರೆಯಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮಹಮ್ಮದ್ ಆಶಿಕ್ ಕಿನ್ಯಾ ಇವರುಗಳನ್ನು ಸ್ಮರಣಿಕೆ ಹಾಗೂ ಗೌರವಧನ ನೀಡುವುದರ ಮೂಲಕ ಅಭಿನಂದಿಸಲಾಯಿತು.

ಇದರೊಂದಿಗೆ ಮದ್ರಸಾ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ, ವಿದ್ಯಾರ್ಥಿಗಳ ಸಾಧನೆಯಲ್ಲಿ ಪ್ರಮುಖ ಪಾತ್ರಕಾರರಾದ ಅಬ್ದುಲ್ ರಹಿಮಾನ್ ದಾರಿಮಿಯವರನ್ನು ಶಾಲು ಹೊದಿಸಿ ಗೌರವಧನದೊಂದಿಗೆ ಸನ್ಮಾನಿಸಲಾಯಿತು. ರೇಂಜ್ ಮಟ್ಟದ ಮುಅಲ್ಲಿಂ ನೆರವು ನಿಧಿಗೆ ಸಂಗ್ರಹಿಸಲಾದ ಸಹಾಯಧನವನ್ನು ಜಂಇಯ್ಯತುಲ್ ಮುಅಲ್ಲಿಮೀನ್ ದೇರಳಕಟ್ಟೆ ರೇಂಜ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ದಾರಿಮಿಯವರಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಮನಾರುಲ್ ಹುದಾ ಮಸೀದಿ ಅಧ್ಯಕ್ಷ ಸಯ್ಯದ್ ಆಲಿ ಅಧ್ಯಕ್ಷತೆ ವಹಿಸಿದ್ದು ಬದ್ರಿಯಾ ಜುಮ್ಮಾ ಮಸೀದಿ ದೇರಳಕಟ್ಟೆ ಇದರ ಅಧ್ಯಕ್ಷ ಅಬೂಬಕ್ಕರ್ ಹಾಜಿ ನಾಟೆಕಲ್ ಹಿತವಚನ ನೀಡಿದರು. ಅಬ್ದುಲ್ ಲತೀಫ್ ದಾರಿಮಿ ಉದ್ಘಾಟಿಸಿ, ಅಬ್ದುಲ್ ರಹಿಮಾನ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಮಹಮ್ಮದ್ ಪನೀರ್, ಅಬ್ದುರ್ರಹ್ಮಾನ್ ಹಾಜಿ ಏಷ್ಯನ್, ಪುತ್ತು ಹಾಜಿ ಏಷ್ಯನ್, ಹಿರಿಯರಾದ ಮೈಸೂರು ಮೋನಾಕ ಉಪಸ್ಥಿತರಿದ್ದರು. ಕಾರ್ಯದರ್ಶಿ ಅಶ್ರಫ್ ಮಂಚಿ ಸ್ವಾಗತಿಸಿ ನಿರೂಪಿಸಿದರು.

By dtv

Leave a Reply

Your email address will not be published. Required fields are marked *

error: Content is protected !!