';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಆರ್ಯಾಪು ಗ್ರಾಮದ ವಳತ್ತಡ್ಕ ಬದ್ರಿಯಾ ಜುಮಾ ಮಸ್ಜಿದ್ ಇದರ ವತಿಯಿಂದ ನೂತನವಾಗಿ ನಿರ್ಮಿಸಿದ ಮಸೀದಿಯ ಮುಂಭಾಗದ ಕಾಂಕ್ರೀಟೀಕೃತ ರಸ್ತೆಯನ್ನು ಇಂದು ಉದ್ಘಾಟನೆ ಮಾಡಲಾಯಿತು.
ಜಮಾಅತ್ ಕಮಿಟಿ ಅಧ್ಯಕ್ಷರಾದ ಅಹ್ಮದ್ ಹಾಜಿಯವರು ಉದ್ಘಾಟನೆ ನೆರವೇರಿಸಿದರು. ಸ್ಥಳೀಯ ಖತೀಬರಾದ ಎ.ಎಸ್ ಕೌಸರಿ ಉಸ್ತಾದರು ದುಆ ನೆರವೇರಿಸಿದರು.
ಜಮಾಅತ್ ಕಮಿಟಿ ಸದಸ್ಯರಾದ ನಗರಸಭಾ ಸದಸ್ಯ ರಿಯಾಝ್ ಕೊಪ್ಪಳ ಸಾಂಕೇತಿಕವಾಗಿ ವಾಹನ ಚಲಾಯಿಸುವ ಮೂಲಕ ರಸ್ತೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸದರ್ ಮುಅಲ್ಲಿಂ ಪಿ.ಕೆ ಇಬ್ರಾಹಿಂ ಮುಸ್ಲಿಯಾರ್, ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ರಝಾಕ್ ಬಳ್ಳೇರಿ, ಜೊತೆ ಕಾರ್ಯದರ್ಶಿ ಮುನೀರ್ ಪಂಜ, ಸದಸ್ಯರಾದ ಶರೀಫ್ ಪಂಜ, ಹಬೀಬ್, ಇಸಾಕ್, ಮುರ್ಶಿದುಲ್ ಅನಾಂ ಯಂಗ್ ಮೆನ್ಸ್ ಕಮಿಟಿ ಅಧ್ಯಕ್ಷರಾದ ರಫೀಕ್ ಬಳ್ಳೇರಿ ಮೊದಲಾದವರು ಉಪಸ್ಥಿತರಿದ್ದರು.