ಮಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಎಸ್ಡಿಪಿಐ ಪಕ್ಷದ ಜನಾಧಿಕಾರ ಸಮಾವೇಶಕ್ಕೆ ತೆರಳುತ್ತಿದ್ದ ವೇಳೆ ಪೋಲಿಸರಿಗೆ ಅವಾಚ್ಯವಾಗಿ ನಿಂದಿಸಿದ್ದ ಆರೋಪಿಗಳನ್ನು ಪೋಲಿಸರು ಬೆಂಗಳೂರು ಮತ್ತು ಮೈಸೂರಿನಲ್ಲಿ ಬಂದಿಸಿದ್ದಾರೆ.

ಎಸ್ಡಿಪಿಐ ಸಮಾವೇಶಕ್ಕೆ ತೆರಳುತ್ತಿದ್ದ ಸಮಯದಲ್ಲಿ “ನಾಯಿಂಡೆ ಮೋನೆ ಪೋಲಿಸೇ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುವ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ವೀಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಪೋಲಿಸರು, ಕರ್ತ್ಯವ್ಯಕ್ಕೆ ಅಡ್ಡಿ, ವೇಗದ ಚಲಾವಣೆ, ಕಾನೂನು ಉಲ್ಲಂಘನೆ ಸೇರಿದಂತೆ ವಿವಿಧ ಸೆಕ್ಷಣ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಇದೀಗ ಆರೋಪಿಗಳನ್ನು ಬಂದಿಸಿದ್ದಾರೆ.

ಪ್ರಮುಖ ಆರೋಪಿಗಳಾದ ನೌಶಾದ್, ಹೈದರಾಳಿ ಮತ್ತು ಆರೋಪಿಗಳಿಗೆ ಆಶ್ರಯ ನೀಡಿದ್ದ ಇತರ ನಾಲ್ವರನ್ನು ಪೋಲಿಸರು ಬಂದಿಸಿದ್ದಾರೆ.

ಆರೋಪಿ ನೌಶಾದ್ನನ್ನು ಬಂದಿಸಲು ತೆರಳುತ್ತಿದ್ದ ವೇಳೆ ಪಿಎಸ್ಐ ಯನ್ನು ತಳ್ಳಿ ತಪ್ಪಿಸಲು ಯತ್ನಿಸಿದ್ದಾನೆ. ಈ ಕುರಿತು ಬೆಂಗಳೂರಿನ ಮಡಿವಾಳ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.