ಬಂಟ್ವಾಳ: ಸುದ್ದಿಗಾರರೊಂದಿಗೆ ಮಾತನಾಡಿದ ಭಟ್ ನಾಲಗೆ ಇದೆ ಎಂದು ಅಸಂಬದ್ಧವಾದ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ದೇಶದ್ರೋಹ ಹಾಗೂ ನಪುಂಸಕತೆಯ ನಡುವಿರುವ ವ್ಯತ್ಯಾಸ ಏನು ಅಂತ ಹೇಳಲಿ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಎಚ್ಚರಿಕೆ ನೀಡಿದ್ದಾರೆ.
ಆರ್‌ಎಸ್‌ಎಸ್ ಬಗ್ಗೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನ ಹೇಳಿಕೆಗೆ ನಿನ್ನೆ ಕಲ್ಲಡ್ಕದಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ, ಕಳೆದ 97 ವರ್ಷಗಳಿಂದ ದೇಶಕ್ಕಾಗಿ ಬದುಕುತ್ತಿರುವ, ಸೇವೆಯ ಕಣ್ಣ ಮುಂದೆ ಇಟ್ಟುಕೊಂಡು, ಕೋಟಿ ಕೋಟಿ ಜನರಿಗೆ ದೇಶಕ್ಕೋಸ್ಕರ ಬದುಕುವ ಚಿಂತನೆ ನಡೆಸುತ್ತಿರುವ ಏಕೈಕ ಸಂಸ್ಥೆ ಅದು ಆರ್‌ಎಸ್‌ಎಸ್ ಇದರ ಬಗ್ಗೆ ಮಾತನಾಡಲು ಇವರಲ್ಲಿ ಏನಿದೆ ನೈತಿಕತೆ ಎಂದು ಅವರು ಗುಡುಗಿದ್ದಾರೆ.
ಸುಮಾರು ವರ್ಷಗಳ ಹಿಂದೆ ಮುಸ್ಲಿಂ ದೇಶಕ್ಕೆ ಹೊರಟ ಎರಡು ವಿಮಾನಗಳು ರಾಜಸ್ಥಾನದಲ್ಲಿ ಅಪಘಾತ ನಡೆದ ಸಂದರ್ಭದಲ್ಲಿ ತಕ್ಷಣ ಅಲ್ಲಿ ಹೋಗಿದ್ದು ಆರ್.ಎಸ್.ಎಸ್.ಸಂಘಟನೆ, ಅಲ್ಲಿ ಹೋಗಿ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗಳ ಶವ ಹಾಗೂ ಚಿನ್ನಾಭರಣಗಳನ್ನು ಅವರ ಅವರ ಕುಟುಂಬಕ್ಕೆ ಹಸ್ತಾಂತರ ಮಾಡಿದ ಬಳಿಕ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಅವರು ಅಲ್ಲಿಗೆ ಭೇಟಿ ನೀಡಿ ಮೊತ್ತಮೊದಲ ಬಾರಿಗೆ ಆರ್.ಎಸ್.ಎಸ್.ಬಗ್ಗೆ ಹೊಗಳಿ ಮಾತನಾಡಿದರು.
ಸರ್ವೇ ಸಾಮಾನ್ಯರಿಗೋಸ್ಕರ ಬದುಕುವುದು ಸಂಘದ ಮೂಲ ಉದ್ದೇಶ. ದಿನ ನಿತ್ಯ ಭಾರತ್ ಮಾತ ಕೀ ಜೈ ಅಂತ ಹೇಳಿದರೆ ಅದು ಸಂಘದ ಕಾರ್ಯಕರ್ತರು ಮಾತ್ರ. ಇವರು ಇಟಲಿಯವರಿಗೆ ಜೈ ಕಾರ ಹಾಕಿದವರು. ದೇಶ ವಿಭಜನೆ ಮಾಡಿದ್ದು ಯಾರು? ಸಮಾಜ ವಿಭಜನೆ ಮಾಡಿದ್ದು ಯಾರು?
ನೆಹರು, ಗಾಂಧೀಜಿಯವರು ಎಂಬುದು ಇವರಿಗೆ ನೆನಪಿದೆಯಾ? ಅ ಮೂರೇ ಜನ ಇದ್ದದ್ದು, ಮುಸ್ಲಿಂ ಲೀಗ್, ಕಾಂಗ್ರೆಸ್, ಬ್ರಿಟಿಷರು. ಇವರು ದೇಶ ವಿಭಜನೆ ಮಾಡಿ ಇಷ್ಟು ದೊಡ್ಡ ಆಪತ್ತು ಬಂದಿದೆ ಅಲ್ವಾ ಅದನ್ನು ನಾವು ಒಪ್ಪಿಕೊಳ್ಳಬೇಕಾಲ್ವ ಎಂದು ಅವರು ಪ್ರಶ್ನಿಸಿದರು.
ದೇಶ ವಿಭಜನೆಯ ಕಾರಣ ನಿತ್ಯ ನಿರಂತರ ತಲೆ ಬಿಸಿ ಆಗುವಂತೆ ಮಾಡಿದ್ದು ಕಾಂಗ್ರೇಸ್ ಅಲ್ವಾ, ಹೊರಗಿನಿಂದ ಆಕ್ರಮಣ, ಒಳಗಿನಿಂದ ಅಕ್ರಮಣ, ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಲು ಅವಕಾಶ ನೀಡಿದ್ದು ಕಾಂಗ್ರೇಸ್ ಅಲ್ವವೇ ಎಂದು ಪ್ರಶ್ನೆ ಮಾಡಿದರು.
ಮಳಲಿಯನ್ನು ಬಿಟ್ಟುಕೊಡುವ ಪ್ರಶ್ನೆಯಿಲ್ಲ: ಪ್ರಭಾಕರ ಭಟ್
ಮಳಲಿಯ ಮಸೀದಿಯಲ್ಲಿ ಹಿಂದೂ ಧಾರ್ಮಿಕ ಕೇಂದ್ರಕ್ಕೆ ಸಂಬಂಧಿಸಿದ ಕುರುಹುಗಳು ಸಿಕ್ಕಿದ ಕಾರಣಕ್ಕಾಗಿ ಅದನ್ನು ಒಪ್ಪಂದ ಮಾಡಿಕೊಂಡು ಹಿಂದೂಗಳಿಗೆ ಬಿಟ್ಟು ಕೊಡಬೇಕು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ. ಇಂತಹ ಅನೇಕ ಕೇಂದ್ರಗಳು ಇವೆ. ಎಲ್ಲವನ್ನೂ ಬಿಟ್ಟುಕೊಡುವ ಒಪ್ಪಂದಕ್ಕೆ ತಯಾರಿರಬೇಕು ಎಂದರು.
ದೇವಸ್ಥಾನಕ್ಕೆ ಮತ್ತು ಮಸೀದಿ, ಚರ್ಚ್‌ಗೆ ವ್ಯತ್ಯಾಸ ಇದೆ. ಅದು ಎರಡೂ ಕೂಡ ಪ್ರಾರ್ಥನಾ ಮಂದಿರಗಳು.ಅದು ಎಲ್ಲಿ ಬೇಕಾದರೂ ಮಾಡಬಹುದು. ಆದರೆ ದೇವಸ್ಥಾನ, ದೈವಸ್ಥಾನಗಳಿಗೆ ಇತಿಹಾಸ ಇರುವುದರಿಂದ ಅದೇ ಸ್ಥಳದಲ್ಲಿ ನಿರ್ಮಾಣವಾಗಬೇಕಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.