';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಕುಂಬ್ರ ಸಮೀಪದ ಅರಿಯಡ್ಕ ಜಮಾಅತ್ನ ಮಿಫ್ತಾಹುಲ್ ಉಲೂಮ್ ಮದ್ರಸ ವಿದ್ಯಾರ್ಥಿಗಳಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅರಿಯಡ್ಕ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಪಿಎಂ ಅಬ್ದುಲ್ ರಹಮಾನ್ ಹಾಜಿ ಯವರ ಅಧ್ಯಕ್ಷತೆಯಲ್ಲಿ ಫಲನೀಡುವ ಹಣ್ಣಿನ ಗಿಡವನ್ನು ನೆಡುವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅರಿಯಡ್ಕ ಖತೀಬರಾದ ಅಬ್ದುಲ್ ಜಲೀಲ್ ಸಖಾಫಿ ಉಸ್ತಾದರು ಗಿಡವನ್ನು ನೆಟ್ಟು ಇಸ್ಲಾಮಿನಲ್ಲಿ ಗಿಡ ನೆಡುವುದರ ಮಹತ್ವವನ್ನು ಎಲ್ಲರೂ ಸರಿಯಾಗಿ ತಿಳಿದಿದ್ದರೆ ದಿನಕ್ಕೆ ಒಂದು ಗಿಡವನ್ನು ನಡುತ್ತಿದ್ದರು ಎಂದು ಮದ್ರಸಾ ವಿದ್ಯಾರ್ಥಿಗಳಿಗೆ ಗಿಡ ನೆಡುವುದರ ಮಹತ್ವವನ್ನು ಅರ್ಥವತ್ತಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಪ್ರಧಾನಕಾಯದರ್ಶಿ ಪಿಎಂ ಅಬ್ಬಾಸ್ ಹಾಜಿ,
ಉಪಾಧ್ಯಕ್ಷರಾದ ಇಬ್ರಾಹಿಮ್ ಎ.ಆರ್, ಸದರ್ ಉಸ್ತಾದರಾದ ಅಬ್ದುಲ್ ಕರೀಂ ಬಾಹಸನಿ, ಅಬೂಬಕ್ಕರ್ ಉಸ್ತಾದ್ ಹಾಗೂ ಜಮಾತ್ ಕಮಿಟಿ ಸದಸ್ಯರು ಉಪಸ್ಥಿತರಿದ್ದರು