ಪುತ್ತೂರು: ಹಿಜಾಬ್ ಪರ ಪ್ರತಿಭಟನೆ ನಡೆಸಿದ 24 ವಿದ್ಯಾರ್ಥಿನಿಯರನ್ನು ನಿನ್ನೆ ಒಂದು ವಾರಗಳ ಕಾಲ ಸಸ್ಪೆಂಡ್ ಮಾಡಲಾಗಿದೆ. ಇವತ್ತು ಪ್ರತಿಭಟನೆ ಮಾಡಿದಲ್ಲಿ ಅದೇ ರೀತಿಯ ಕ್ರಮ ಜರುಗಿಸಲಾಗುವುದು ಎಂದು ಉಪ್ಪಿನಂಗಡಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹೈಕೋರ್ಟ್ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು. ಹಿಜಾಬ್ ಪರ ಪ್ರತಿಭಟನೆ ನಡೆಸಿದ 24 ವಿದ್ಯಾರ್ಥಿನಿಯರನ್ನು ನಿನ್ನೆ ಸಸ್ಪೆಂಡ್ ಮಾಡಲಾಗಿದೆ. ಇವತ್ತು ಪ್ರತಿಭಟನೆ ಮಾಡಿದಲ್ಲಿ ಅದೇ ರೀತಿಯ ಕ್ರಮ ಜರುಗಿಸಲಾಗುವುದು ಎಂದರು.
ವಿದ್ಯಾರ್ಥಿನಿಯರಿಗೆ ಪಾಠ ಮುಖ್ಯವೋ, ಧಾರ್ಮಿಕತೆ ಮುಖ್ಯವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಕಾಂಗ್ರೆಸ್ ಮುಖಂಡ ಯು.ಟಿ.ಖಾದರ್ ಹಿಜಾಬ್ ಕುರಿತ ವಾಸ್ತವಿಕತೆಯನ್ನು ಹೇಳಿದ್ದಾರೆ. ಓರ್ವ ಮುಸ್ಲಿಂ ಮುಖಂಡನ ಮಾತನ್ನು ವಿದ್ಯಾರ್ಥಿಗಳು ಒಪ್ಪಿಕೊಳ್ಳಬೇಕು. ವಿದ್ಯಾರ್ಥಿಗಳ ಬೇಜಾವಬ್ದಾರಿಯ ನಡೆಯನ್ನು ಇನ್ನು ಸಹಿಸುವುದಿಲ್ಲ.
ಸರಕಾರಿ ಕಾಲೇಜು ಸರ್ವ ಧರ್ಮೀಯರಿಗೆ ಪಾಠ, ಪ್ರವಚನ ನೀಡುವ ಕೇಂದ್ರವಾಗಿದೆ. ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.