ಸುರತ್ಕಲ್: ಇಲ್ಲಿನ ಬೈಕಂಪಾಡಿ ಮೀನಕಳಿ ರಸ್ತೆಯಲ್ಲಿ ನಿನ್ನೆ ರಾತ್ರಿ ದುಷ್ಕರ್ಮಿಗಳಿಂದ ತಲ್ವಾರು ದಾಳಿಯಾಗಿ ಗಂಭೀರ ಗಾಯಗೊಂಡಿದ್ದ ರೌಡಿಶೀಟರ್ ಯಾನೇ ರಾಘವೇಂದ್ರ ಬಂಗೇರ(28) ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ ಮೃತಪಟ್ಟಿದ್ದಾರೆ.
5 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ರಾಜು ಯಾನೆ ರವಿರಾಜ್ ಬಂಗೇರ ಅಲಿಯಾಸ್ ರಾಘವೇಂದ್ರ ಕೊಲೆಯಾದ ರೌಡಿಶಿಟರ್
ನಿನ್ನೆ ರವಿರಾಜ್ ಪತ್ನಿಯ ಹುಟ್ಟು ಹಬ್ಬ ಇದ್ದ ಕಾರಣ ನಿನ್ನೆ ಸಂಜೆ ಮನೆಯಲ್ಲಿಯೇ ಬರ್ಡೆ ಸೆಲೆಬ್ರೇಶನ್ ಇತ್ತು.
ಪತ್ನಿಯ ಬರ್ತ್‌ಡೇ ಕೇಕ್ ಕಟ್ಟಿಂಗ್ ಬಳಿಕ 7 ಗಂಟೆಯ ಸುಮಾರಿಗೆ ಈತ ಮನೆಯಿಂದ ಕೆಲವೇ ಮೀಟರ್ ದೂರದ ಬೇಕರಿಗೆ ಬರುತ್ತಿದ್ದಂತೆ ಬೈಕಿನಲ್ಲಿ ಬಂದಿದ್ದ ಇಬ್ಬರು ಅಟ್ಟಾಡಿಸಿ ತಲವಾರಿನಲ್ಲಿ ಕಡಿದಿದ್ದಾರೆ. ಕುತ್ತಿಗೆ, ಭುಜ, ಮುಖಕ್ಕೆ ಗಂಭೀರ ಗಾಯಗೊಂಡು ರಕ್ತದೋಕುಳಿಯಲ್ಲಿ ನೆಲಕ್ಕೆ ಬಿದ್ದು, ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ, ಯಾರೊಬ್ಬರೂ ಹೆದರಿ ಸಹಾಯಕ್ಕೆ ಬಂದಿರಲಿಲ್ಲ.
ಸುಮಾರು ಹೊತ್ತಿನ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆ ವೇಳೆಗಾಗಲೇ ತೀವ್ರ ರಕ್ತಸ್ರಾವದಿಂದ ಬಳಲಿದ್ದ ರಾಜು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.
ತನ್ನ ಸ್ನೇಹಿತರೇ ದಾಳಿ ನಡೆಸಿದ್ದಾರೆ ಎಂದು ಜೀವಣ್ಮರಣ ಸ್ಥಿತಿಯಲ್ಲಿದ್ದ ರಾಜಾ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಘಟನೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.