ಕಲಾಯಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ 13ನೇ ಸಂಸ್ಥಪಣಾ ದಿನದ ಪ್ರಯುಕ್ತ ಮದೀನಾ ಜುಮಾ ಮಸೀದಿ ಕಲಾಯಿ ಮುಂಭಾಗದಲ್ಲಿ ದ್ವಜಾರೋಹಣ ಕಾರ್ಯಕ್ರಮ ಹಾಗೂ SSLC ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್ಡಿಪಿಐ ಕಲಾಯಿ ಬೂತ್ ಸಮಿತಿ ಅಧ್ಯಕ್ಷರಾದ ಯಾಕುಬ್ ದ್ವಜಾರೋಹಣ ನೆರವೇರಿಸಿದರು.
SSLC ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಫಾತಿಮತ್ ನುಶ್ರತ್, ಮಹರೂಫ್ ಮರಿಯಮ್ಮ, ಅನ್ವಿಶಾ ಶೆಟ್ಟಿ ಇವರಿಗೆ ಅಮ್ಮುಂಜೆ ಗ್ರಾಮ ಪಂಚಾಯತ್ SDPI ಸದಸ್ಯರದ ಫೌಝಿಯಾ ಹನೀಫ್ ಮತ್ತು ನಫೀಸಾ ಖಾಲಿದ್ ಸನ್ಮಾನಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ಖಾದರ್ ಅಮ್ಮೆಮ್ಮಾರ್ ಸಂಸ್ಥಾಪನಾ ದಿನದ ಸಂದೇಶ ಭಾಷಣವನ್ನು ಮಾಡಿದರು ಅಮ್ಮುಂಜೆ-ಕರಿಯಂಗಳ ಗ್ರಾಮ ಸಮಿತಿ ಸದಸ್ಯರಾದ ನೌಶದ್ ಕಲಾಯಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.
ಅಮ್ಮುಂಜೆ-ಕರಿಯಂಗಳ ಗ್ರಾಮ ಸಮಿತಿ ಅಧ್ಯಕ್ಷರಾದ ಇಕ್ಬಾಲ್ MP ಪಕ್ಷ ಸ್ಥಾಪಿಸಿದ ಉದ್ದೇಶವನ್ನು ತಿಳಿಸಿದರು
ಈ ಸಂದರ್ಭ HIWEC ಅಧ್ಯಕ್ಷರಾದ ಶರೀಫ್ ಕಲಾಯಿ, GCC ಸದಸ್ಯರಾದ ಆದಮ್ ಎಳಂದೂರ್, ಯುವ ಉದ್ಯಮಿ ಅಲ್ತಾಫ್ ಕುಳಾಯಿ, KM ಮೊಹಮ್ಮದ್ ಹಾಗೂ ಮುರ್ಷಿದ್ ಪಲ್ಲಿಪಾಡಿ ಉಪಸ್ಥಿತರಿದ್ದರು.