ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಇದರ ಯುಎಇ ರಾಷ್ಟ್ರೀಯ ಸಮಿತಿಯ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಸಖಾಫಿ ಕೆದುಂಬಾಡಿ ಯವರನ್ನು ನೇಮಕ ಮಾಡಲಾಯಿತು. ತಾ.11-06-2022ರಂದು ಶನಿವಾರ ದುಬೈಯ ಅಬ್ಜದ್ ಗ್ಯ್ರಾನ್ಡ್ ಹೋಟೆಲ್ ಸಬಾಂಗಣದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿಯವರ ಅಧ್ಯಕ್ಷತೆ ಯಲ್ಲಿ ನಡೆದ ಸಮಾರಂಭದಲ್ಲಿ 2022-24ನೆ ಸಾಲಿನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಸಮಿತಿಯ ನೂತನ ಉಪಾಧ್ಯಕ್ಷರಾಗಿ ಝೈನುದ್ದೀನ್ ಹಾಜಿ ಬೆಳ್ಳಾರೆ ನೇಮಕಗೊಂಡರೆ ಪ್ರಧಾನ ಕಾರ್ಯದರ್ಶಿಯಾಗಿ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಮೂಸಾ ಹಾಜಿ ಬಸರಾ ಪುನರಾಯ್ಕೆಯಾದರು. ಕೋಶಾಧಿಕಾರಿಯಾಗಿ ಇಬ್ರಾಹೀಂ ಹಾಜಿ ಬ್ರೈಟ್‍ರನ್ನು ಆರಿಸಲಾಯಿತು.
ಸಂಘಟನಾ ಸಮಿತಿಯ ಅಧ್ಯಕ್ಷರಾಗಿ ಮುಹಮ್ಮದ್ ಕುಂಞ ಸಖಾಫಿ, ಕಾರ್ಯದರ್ಶಿ ಹಂಝ ಎರುಮಾಡ್, ಅಡ್ಮಿನ್ ವಿಭಾಗದ ಅಧ್ಯಕ್ಷರಾಗಿ ಅಬ್ದುಲ್ ಕರೀಂ ಮುಸ್ಲಿಯಾರ್, ಕಾರ್ಯದರ್ಶಿ ಮೊಹಮ್ಮದ್ ರಜಬ್ ಉಚ್ಚಿಲ, ಪ್ರಕಾಶನ ವಿಭಾಗದ ಅಧ್ಯಕ್ಷರಾಗಿ ಅಬ್ದುರ್ರಹೀಮ್ ಕೋಡಿ, ಕಾರ್ಯದರ್ಶಿ ಅಕ್ರಮ್ ಬಿ.ಸಿ.ರೋಡ್, ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಶಾಹುಲ್ ಹಮೀದ್ ಸಖಾಫಿ, ಕಾರ್ಯದರ್ಶಿ ಅಬೂಸ್ವಾಲಿಹ್ ಸಖಾಫಿ ಇನೋಳಿ, ಸಾಂತ್ವನ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ಲ ಹಾಜಿ ನಲ್ಕ, ಕಾರ್ಯದರ್ಶಿ ಹಕೀಂ ತುರ್ಕಳಿಕೆ, ಇಹ್ಸಾನ್ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಸಅದಿ, ಕಾರ್ಯದರ್ಶಿ ಅಬ್ದುಲ್ ಅಝೀಝ್ ಅಹ್ಸನಿ ನೇಮಕಗೊಂಡರು.
ವಿತ್ತೀಯ ನಿಯಂತ್ರಕ( ಆರ್ ಒ )ಅಬ್ದುಲ್ ಹಮೀದ್ ಸಅದಿಯ ಮುಂದಾಳುತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕರ್ನಾಟಕ ರಾಜ್ಯ ಎಸ್‍ವೈಎಸ್ ಪ್ರಧಾನ ಕಾರ್ಯದರ್ಶಿ ಹಫೀಳ್ ಸಅದಿ ಹಾಗೂ
ಕೆಸಿಎಫ್ ಐಎನ್‍ಸಿ ಪ್ರಧಾನ ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಮಿತಿಯ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಿ ಸಭೆಯಲ್ಲಿ ಅಂಗೀಕರಿಸಲಾಯಿತು.
ಅಧ್ಯಕ್ಷ ಭಾಷಣ ನಡೆಸಿದ ಅಬ್ದುಲ್ ಜಲೀಲ್ ನಿಝಾಮಿ ಯವರು ಹಾಲಿ ಸಮಿತಿಯು ನಡೆಸಿದ ಕಾರ್ಯ ವೈಖರಿಗಳನ್ನು ವಿಶೇಷವಾಗಿ ದುಬೈ ಮುನಿಸಿಪಾಲಿಟಿ ಆಯೋಜಿಸಿದ ಕ್ಲೀನ್ ಅಪ್ ದ ವರ್ಲ್ಡ್ 2020 ಯಲ್ಲಿ ಪಾಲ್ಗೊಳ್ಳುವಿಕೆ, ಕೋವಿಡ್ ಸಮಯದಲ್ಲಿ ದುಬೈ ಪೊಲೀಸ್ ನೊಂದಿಗೆ ಸ್ವಯಂ ಸೇವಕರಾಗಿ ಕಾರ್ಯನಿರ್ವಹಣೆ ಹಾಗೂ ಕೋವಿಡ್ ಸಂದರ್ಭದಲ್ಲಿ 1000 ಕ್ಕೂ ಹೆಚ್ಚು ಅನಿವಾಸಿ ಕನ್ನಡಿಗರನ್ನು ಊರಿಗೆ ಕಳುಹಿಸಲು ಆಯೋಜಿಸಿದ ಏಳು ಚಾರ್ಟರ್ಡ್ ವಿಮಾನ ಹೀಗೆ ಕೆ ಸಿ ಎಫ್ ನಡೆಸಿದ ಹಲವು ಕಾರ್ಯಕ್ರಮಗಳನ್ನು ವಿವರವಾಗಿ ತಿಳಿಸಿದರು.
ಸಾಂತ್ವನ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ 24*7 ಸನ್ನದ್ಧ ಸಂಘವು ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಸಮಯದಲ್ಲಿ ನಡೆಸಿದ ಸಾಂತ್ವನ ಕೆಲಸಗಳನ್ನು ಪರಿಗಣಿಸಿ ಸನ್ನದ್ಧ ಸಂಘದ ನಾಯಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಅನಿವಾಸಿ ಕನ್ನಡಿಗರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ಬಂದಿರುವ ಈ ಸಂಘಟನೆಯು ಶೈಕ್ಷಣಿಕ, ಮಾನವೀಯ ಸೇವೆ, ಆರೋಗ್ಯ ಯೋಜನೆಗಳು ಎಂಬಿತ್ಯಾದಿ ಹತ್ತು ಹಲವು ಸೇವೆಗಳ ಮೂಲಕ ಕನ್ನಡಿಗರ ಮನಗಳಲ್ಲಿ ಮನೆಮಾತಾಗಿದೆ. 2013ರಲ್ಲಿ ದುಬೈಯಲ್ಲಿ ಸ್ಥಾಪಿಸಲಾದ ಕೆಸಿಎಫ್ ಸಂಘ ಟನೆಯು ಯುಎಇ, ಸೌದಿ ಅರೇಬಿಯಾ, ಬಹರೈನ್, ಕುವೈಟ್,ಒಮಾನ್,ಖತರ್, ಮಲೇಷ್ಯಾ, ಲಂಡನ್ ಗಳಲ್ಲಿ ಕಾರ್ಯಾಚರಿಸುತ್ತಿದೆ.