';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಡುಪಿ: ಶಾಲೆಗೆ ಹೋಗುವ ದಾರಿಯಲ್ಲಿ ಚಿರತೆ ಕಂಡು ವಿದ್ಯಾರ್ಥಿಗಳು ಭಯಪಟ್ಟ ಘಟನೆ ನಡೆದಿದ್ದು, ಸ್ಥಳೀಯರು ಚಿರತೆ ವಿಡಿಯೋ ಮಾಡಿ ಇದೀಗ ಅರಣ್ಯಾಧಿಕಾರಿಗಳಿಗೆ ನೀಡಿದ ಘಟನೆ ಉಡುಪಿಯ ಕೋಟ ಮೂಡುಗಿಳಿಯಾರು ಬಳಿ ನಡೆದಿದೆ.
ಅವರು ಆಗಮಿಸಿ ಚಿರತೆಯನ್ನು ಹಿಡಿಯುವ ಭರವಸೆ ನೀಡಿದ್ದಾರೆ. ಇಲ್ಲಿನ ಮೂಡುಗಿಳಿಯಾರು ಸಣ್ಣ ಬಸವನಕಲ್ಲು ಪ್ರದೇಶದಲ್ಲಿ ಶಾಲಾ ವಿದ್ಯಾರ್ಥಿಗಳು ಮನೆಗೆ ತೆರಳುವಾಗ ಚಿರತೆ ಪತ್ತೆಯಾಗಿದೆ.
ಜನಸಂಚಾರ ಹೆಚ್ಚಿರುವ ರಸ್ತೆ ಪಕ್ಕದ ಪೊದೆಯ ಬಳಿ ಚಿರತೆ ಪತ್ತೆಯಾಗಿದ್ದು, ಪೊದೆಯ ಹೊರಗೆ ಬಂದಾಗ ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಚಿರತೆ ದೃಶ್ಯ ಸೆರೆ ಹಿಡಿದಿದ್ದಾರೆ.
ವಿಶೇಷವೆಂದರೆ ಕಳೆದ ವರ್ಷವೂ ಇದೇ ಪರಿಸರದಲ್ಲಿ ಚಿರತೆ ಪತ್ತೆಯಾಗಿ, ಸ್ಥಳೀಯರಲ್ಲಿ ಭೀತಿ ಮೂಡಿಸಿತ್ತು. ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಪರಾರಿಯಾಗಿತ್ತು.
ಇದೀಗ ಚಿರತೆಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ.