dtvkannada

'; } else { echo "Sorry! You are Blocked from seeing the Ads"; } ?>

ತ್ರಿಶೂರ್: ತಾಯಿಯ ಆಸ್ತಿಗಾಗಿ ಸ್ವಂತ ಮಗಳೇ ತನ್ನ ತಾಯಿಗೆ ಆಹಾರದಲ್ಲಿ ವಿಷ ಹಾಕಿ ಕೊಂದ ಘಟನೆ ಕೇರಳದ ಕುನ್ನಂಕುಳಂನ ಕಿಜೂರ್‌ನಲ್ಲಿಂದು ನಡೆದಿದೆ.

ಘಟನೆಯಲ್ಲಿ ಮೃತಪಟ್ಟ ಮಹಿಳೆ ಚೋಳಿಯಟ್ಟು ನಿವಾಸಿ ಚಂದ್ರನ್ ಎಂಬವರ ಪತ್ನಿ ರುಕ್ಮಿಣಿ (57) ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

ಕೃತ್ಯ ಎಸಗಿದ ಆರೋಪಿ ಮಗಳಾದ ಇಂದುಲೇಖಾ (40) ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ:
ಕೆಲ ವಾರಗಳ ಹಿಂದೆ ರುಕ್ಮಿಣಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು ತದನಂತರ ಅವರನ್ನು ತ್ರಿಶೂರ್‌ನ ಖಾಸಗಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು.

'; } else { echo "Sorry! You are Blocked from seeing the Ads"; } ?>

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಹೆತ್ತಬ್ಬೆಯು ಕೊನೆಯುಸಿರೆಳೆದಿದ್ದಾರೆ. ವೈದ್ಯರು ವಿವರವಾದ ತಪಾಸಣೆ ನಡೆಸಿದಾಗ ವಿಷಪ್ರಾಶನದಿಂದಾಗಿ ಸಾವು ಸಂಭವಿಸಿದೆ ಎಂದು ಕಂಡುಬಂದಿದೆ.

ಪೊಲೀಸರು ವಿಚಾರಣೆಯ ಸಮಯದಲ್ಲಿ ಅವರ ಮಗಳನ್ನು ವಶಕ್ಕೆ ತೆಗೆದುಕೊಂಡು ಪ್ರಶ್ನಿಸಿದಾಗ ಆಹಾರದಲ್ಲಿ ವಿಷಪ್ರಾಶನ ಮಾಡಿದ್ದು ತಿಳಿದುಬಂದಿದೆ.

ಪೊಲೀಸರ ಪ್ರಕಾರ, ಇಂದುಲೇಖಾ ತಾಯಿಯಾದ ರುಕ್ಮಣಿಯಿಂದ ಆಸ್ತಿಯನ್ನು ಕೇಳಿದ್ದಳು. ಅದನ್ನು ಒದಗಿಸದಿದ್ದಕ್ಕಾಗಿ ಆ ದ್ವೇಷವೇ ಕೊಲೆಗೆ ಕಾರಣವಾಗಿದ್ದು ಇಂದುಲೇಖಾ, ತಂದೆ ಮತ್ತು ತಾಯಿಗೆ ದೀರ್ಘಕಾಲದಿಂದ ನೀಡುವ ಆಹಾರದಲ್ಲಿ ವಿಷಪೂರಿತ ಮಾತ್ರೆಗಳನ್ನು ಸೇರಿಸುತ್ತಿದ್ದಾರೆ.

ದೇಹದ ಮೇಲೆ ಯಾವ ವಿಷವು ಪರಿಣಾಮ ಬೀರುತ್ತದೆ ಎಂದು ಕಂಡುಹಿಡಿಯಲು ತನ್ನ ಸೆಲ್ ಫೋನಿನಲ್ಲಿ ಗೂಗಲ್ ಮೂಲಕ ತುಂಬಾ ದಿನಗಳ ಹಿಂದೆಯೇ ಮಾತ್ರೆಗಳನ್ನು ಹುಡುಕಿದ ಇತಿಹಾಸವನ್ನು ಕೂಡ ಪೊಲೀಸರು ಕಂಡು ಹಿಡಿದಿದ್ದಾರೆ.

ಇಷ್ಟೊಂದು ಕ್ರೂರವಾಗಿ ಇಷ್ಟೊಂದು ಮಾಸ್ಟರ್ ಪ್ಲಾನ್ ಮೂಲಕ ಹೆತ್ತಬ್ಬೆಯನ್ನು ಹುಟ್ಟಿಸಿದ ತಂದೆಯನ್ನು ಮುಗಿಸಲು ನೋಡಿದ ಮಗಳು ಇದೀಗ‌ಪೊಲೀಸ್ ಅಥಿತಿಯಾಗಿದ್ದಾಳೆ.

ರುಕ್ಮಣಿ ಅವರ ಗಂಡ ಚಂದ್ರನ್ ಅವರು, ನನ್ನ ಹೆಂಡತಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಅಗತ್ಯವಿಲ್ಲ, ಮಗಳ ಮೇಲೆ ಅನುಮಾನವಿದೆ ಎಂದು ಹೇಳಿರುವುದು ತನಿಖೆಗೆ ನಿರ್ಣಾಯಕವಾದ ಮಾಹಿತಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!