ಅಂದು ಪೊಯ್ಯತ್ತಬೈಲ್ ನಮ್ಮನ್ನಗಲಿದ ದುಃಖಕರವಾದ ವಾರ್ತೆಯಾಗಿದೆ ನಿನ್ನೆ ನಮ್ಮ ಕಿವಿಗೆ ಅಪ್ಪಳಿಸಿದ್ದು.
ಮೊಬೈಲ್ ತೆರೆದು ನೋಡಿದಂತೆ ಎಲ್ಲಾ ಗ್ರೂಪ್ ಗಳಲ್ಲೂ ವಾಟ್ಸಾಪ್ ಸ್ಟೇಟಸ್ ಗಳಲ್ಲೂ ಮುಖ ಪುಟಗಳಲ್ಲಿ ಅಂದುವಿನ ಪಾವನ ಮುಖದ ಫೋಟೋಸ್ ಗಳೇ ತುಂಬಿತ್ತು.
ಸುನ್ನೀ ಕಾರ್ಯಕರ್ತರು ಕಣ್ಣೀರಿಟ್ಟು ಪ್ರಾರ್ಥಿಸಿ ಬರೆದು ಹಾಕುವ ಟೈಟಲ್ ಗಳು ಒಂದು ಕಡೆಯಾದರೆ ಉಲಮಾಗಳು, ಸೆಯ್ಯದರು ಪ್ರಾರ್ಥಿಸಿ ಹಾಕುವ ವಾಯ್ಸ್ ಗಳು ಬೇರೆ
ಕಳೆದ 20 ವರುಷಗಳಿಂದ ಮಲಗಿದ್ದಲ್ಲೇ ಜೀವನ ಕಳೆದ ಅಂದು ಅಲ್ಲಾಹನ ಕರೆಗೆ ಇಂದು ಓ..ಗೊಟ್ಟು ಇಹಲೋಕ ತ್ಯಜಿಸಿದ್ದಾರೆ.
ನನ್ನ ಪಾಲಿಗೆ ಮತ್ತೋರ್ವ ಓ..ಖಾಲೀದ್ ಸಾಹೇಬ್ ಅಂದರೆ ತಪ್ಪಾಗಲಾರದು.
20 ವರ್ಷಗಳ ಮುಂಚೆ ಮರದಿಂದ ಬಿದ್ದು ಸೊಂಟದ ಕೆಳಗಡೆ ಬಲವಿಲ್ಲದೇ ಮಲಗಿದ್ದಲ್ಲೇ ಎರಡು ದಶಕಗಳನ್ನು ಕಳೆದ ಅಂದು
ದೀನೀ ಕಾರ್ಯಗಳಿಗೆ ಅವರ ಅನಾರೋಗ್ಯ ಒಮ್ಮೆಯೂ ಅಡ್ಡಿಯಾಗಿರಲಿಲ್ಲ.
ಮಲಗಿದ್ದಲ್ಲೇ ತನ್ನ ಹೊಟ್ಟೆಯ ಮೇಲೆ ಲ್ಯಾಪ್ ಟಾಪ್ ಇಟ್ಟು ಸುನ್ನತ್ ಜಮಾಅತ್ತಿನ ಕಾರ್ಯಕ್ರಮಗಳ ಪೋಸ್ಟರ್ ಮಾಡಿ ಶೇರ್ ಮಾಡಿ, ಪ್ರಚಾರ ಪಡಿಸುತ್ತಿದ್ದ ಅಂದು, ಉಸ್ತಾದರುಗಳ, ಉಲಮಾಗಳ ನಿಕಟವರ್ತಿಯಾಗಿದ್ದರು.
ಸುಬುಹಾನಲ್ಲಾಹ್ ಮರಣ ಹೊಂದುವ ಮುಂಚೆಯೂ ಕೂಡ ಸುನ್ನತ್ ಜಮಾಅತ್ತಿಗಾಗಿ ನಿಸ್ವಾರ್ಥ ಸೇವೆಗೈದು ಕೊನೆಯುಸಿರೆಳೆದಿದ್ದಾರೆ.
ಅಂದುವನ್ನು ಭೇಟಿಯಾಗದ ಉಲಮಾಗಳಿಲ್ಲ, ಸೆಯ್ಯದರಿಲ್ಲ, ಸುಲ್ತಾನುಲ್ ಉಲಮಾ ಸಹಿತ ಹಲವಾರು ನಾಯಕರು ಅಂದುವನ್ನು ಸಮೀಪಿಸಿದ್ದಾರೆ ಎಷ್ಟರ ಮಟ್ಟಿಗೆ ಅಂದರೆ ಆ ಕಡೆಗೆ ಬರುವ ರಾಜಕೀಯ ನಾಯಕರು ಕೂಡ ಅವರನ್ನು ಭೇಟಿಯಾಗುತ್ತಿದ್ದರಂತೆ.
ಮಲಗಿದ್ದಲ್ಲಿಂದಲೇ ಅಂದು ನಿಸ್ವಾರ್ಥವಾಗಿ ದೀನಿ ಸೇವೆ ಮಾಡುತ್ತಿದ್ದರು.
ಸುನ್ನತ್ ಜಮಾಅತ್ತಿಗಾಗಿ ಮಿಡಿಯುವ ತುಡಿಯುವ ಅವರ ಹೃದಯ ವಿಶಾಲತೆ ಪ್ರತಿಯೊಬ್ಬರಿಗೂ ಮಾದರಿ ಜೀವನ.
ಸುನ್ನತ್ ಜಮಾಅತ್ತಿನ ನೇತಾರರನ್ನು ಬಹಳಷ್ಟು ಪ್ರೀತಿಸುತ್ತಿದ್ದ ಅಂದು ಎಂದಿಗೂ ಅಮರ.
ಅವರ ಮರಣ ಹೊಂದಿದ ವಿಷಯ ತಿಳಿಯುತ್ತಿದ್ದಂತೆ ಕಣ್ಣೀರಿಟ್ಟು ಪ್ರಾರ್ಥಿಸಿದ ಈ ಸಮೂಹ, ಅಂದುವಿನ ನೈಜವಾದ ಸುನ್ನತ್ ಜಮಾಅತ್ತಿನ ಸೇವೆಯನ್ನು ಒತ್ತಿ ಹೇಳುತ್ತಿತ್ತು.
ತನ್ನ ಎರಡು ಕಿಡ್ನಿ ಹೋಗಿ ಡಯಾಲಿಸಿಸ್ ನಡೆಯುತ್ತಿದ್ದರೂ ತನ್ನ ಹತ್ತಿರ ಬಂದವರ ಬಳಿ ನಗುಮುಖದಿಂದಲೇ ಮಾತನಾಡುತ್ತಿದ್ದ ಅಂದು ಪ್ರತಿ ಮುಗುಳ್ನಗೆ ಬೀರುವಾಗಲೂ ಒಳಗಡೆ ಅದೆಷ್ಟೋ ದುಃಖಗಳು ತುಂಬಿ ತುಳುಕುತ್ತಿತ್ತೋ ಅಲ್ಲಾಹನೇ ಬಲ್ಲ.
ಅಲ್ಲಾಹು ಪ್ರೀತಿಯ ಸ್ನೇಹಿತನಿಗೆ ಮಗ್ಫೀರತ್ ನೀಡಲಿ(ಆಮೀನ್)