ಸುಳ್ಯ: ಕಾರು ಮತ್ತು ಸ್ಕೂಟಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಅಣ್ಣ ಮತ್ತು ತಂಗಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಜಾಲ್ಸೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಎಲಿಮಲೆ ಸಮೀಪದ ಜಬಳೆಯಲ್ಲಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟ ಯುವಕ ನಿಶಾಂತ್ ಮತ್ತು ಮೋಕ್ಷ 5 ನೇ ತರಗತಿ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.

ನಿಶಾಂತ್ ತನ್ನ ತಂಗಿಯನ್ನು ಕೂರಿಸಿಕೊಂಡು ಎಲಿಮಲೆಯಿಂದ ಮನೆಗೆ ಹೋಗುತ್ತಿದ್ದಾಗ ಸುಳ್ಯ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.

ಮೃತ ನಿಶಾಂತ್ ಕಾರು ಗುದ್ದಿದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲಿಯೇ ಮೃತಪಟ್ಟರೆ , ತೀವ್ರ ಗಾಯಗೊಂಡ ನಿಶಾಂತ್ ನ ತಂಗಿ ಮೋಕ್ಷಳನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಥಮ ಚಿಕಿತ್ಸೆಯ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗುತಿತ್ತು ಆದರೆ ದಾರಿ ಮಧ್ಯೆ ಮೃತ ಪಟ್ಟಿದ್ದಾರೆ.

ಜಬಳೆ ಸಮೀಪದ ಬಾಜಿನಡ್ಕ ದೇವಿದಾಸ್ ಎಂಬವರ ಮಕ್ಕಳಾದ ನಿಶಾಂತ್ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು ಮೋಕ್ಷ 5 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆಂದು ತಿಳಿದು ಬಂದಿದ್ದು ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.