ಮಂಗಳೂರು: ಈಗಾಗಲೇ SDPI ನಾಯಕರನ್ನು ಬಂಧಿಸಿ ಪಕ್ಷವನ್ನು ದಮನಿಸುವ ಕೆಲಸ ನಡೆಯುತ್ತಿದ್ದು 16 ಸೇವಾ ಕೇಂದ್ರಗಳಿಗೆ ಎನ್‌ಐಎ ಬೀಗ ಜಡಿದಿರುವುದು ಯಾಕೆ..? ಇಂದು ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಎಸ್‌ಡಿಪಿಐ ಎಲ್ಲೆಡೆ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಸ್.ಡಿ.ಪಿ.ಐ ದ.ಕ.ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಸ್‌ಡಿಪಿಐ ಮುಖಂಡ ಶಾಫಿ ಬೆಳ್ಳಾರೆ ಇಕ್ಬಾಲ್ ಬೆಳ್ಳಾರೆ ಎಲ್ಲೂ ತಲೆಮರೆಸಿಕೊಂಡವರಲ್ಲ.
ಸಾರ್ವಜನಿಕವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ಯಾಕಾಗಿ ಇವ್ರನ್ನು ಈ ರೀತಿ ಬಂಧಿಸಬೇಕಿತ್ತು. ಮುಖಂಡರನ್ನು ವಿಚಾರಣೆಗೆ ಕರೆದ್ರೆ ಅವೇ ಬರ್ತಾರಲ್ಲವೇ..?ಅದು ಬಿಟ್ಟು ಸಾರ್ವಜನಿಕ ವಾಹನದಲ್ಲಿ ಬರುವ ವೇಳೆ ಯಾಕೆ ಬಂಧಿಸಬೇಕಿತ್ತು..?
ರಾಜ್ಯದಾದ್ಯಂತ SDPI ಪ್ರತಿಭಟನೆಗೆ ಅನುಮತಿ ಕೇಳಿದ್ದು ಇಲಾಖೆ ಎಲ್ಲಾ ಕಡೆ ಅನುಮತಿ ನೀಡಿದೆ. ಆದ್ರೆ ಇವತ್ತು ಮಂಗಳೂರು ಪೊಲೀಸರು ಅನುಮತಿ ರದ್ದುಗೊಳಿಸಿದ್ದಾರೆ.

ನಮ್ಮ ಪ್ರತಿಭಟನೆ ನಮ್ಮ ಹಕ್ಕು ಅದನ್ನು ಪೊಲೀಸ್ ಇಲಾಖೆ ಹತ್ತಿಕ್ಕಿದೆ ಎಂದು ದೂರಿದರು. ನಮ್ಮ 16 ಸೇವಾ ಕೇಂದ್ರಗಳಿಗೆ ಬೀಗ ಹಾಕಿದ್ದು ಅಲ್ಲಿ ಸರ್ಕಾರಿ ಯೋಜನೆಗಳಿಗಾಗಿ ಸಾರ್ವಜನಿಕರು ಬರ್ತಾ ಇದ್ರು. ಈ ಸೇವಾ ಕಚೇರಿಗಳಿಗೆ ಬೀಗ ಹಾಕಿ ಏನು ಸಾಧನೆ ಮಾಡಲು ಹೊರಟ್ಟಿದ್ದಾರೆ.
ಎಲ್ಲಾ ರಕ್ತ ನಿಧಿಗಳಲ್ಲಿ ಎಸ್ಟಿಪಿಐ ಕಾರ್ಯಕರ್ತರ ರಕ್ತ ಇದೆ. ಅದನ್ನು ಕೂಡ ಪೊಲೀಸ್ ಕಮಿಷನರ್ ವಶಕ್ಕೆ ಪಡೆದುಕೊಂಡು ಹೋಗಲಿ ಎಂದರು.
ಈ ಒಂದು ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಅಕ್ಟರ್ ಬೆಳ್ತಂಗಡಿ, ಸದಸ್ಯ ಆಸೀಫ್ ಕೋಟೆಬಾಗಿಲು ಉಪಸ್ಥಿತರಿದ್ದರು.