dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ವಿಮಾನಗಳಿಗೆ ಬೇಕಾಗುವ ದುಬಾರಿ ಪೆಟ್ರೋಲ್‌ಗೆ ಸೀಮೆಎಣ್ಣೆ ಕಲಬೆರಕೆ ಮಾಡಿ ಪೆಟ್ರೋಲ್ ಕದಿಯುತ್ತಿದ್ದ ಸುರತ್ಕಲ್ ಸಮೀಪದ ಬಾಳ ಪ್ರದೇಶಕ್ಕೆ ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಪೆಟ್ರೋಲ್ 2 ಟ್ಯಾಂಕರ್, ಪಿಕಪ್ ಸಹಿತ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.

ಅಧಿಕಾರಿಗಳಿಗೆ ನಿನ್ನೆ ಸಂಜೆ ದೊರೆತ ಖಚಿತ ಮಾಹಿತಿಯ ಮೇರೆಗೆ ಬಾಳ ಒಟ್ಟಿಕಾಯ‌ ತಿರುವು ಬಳಿ ದಾಳಿ ನಡೆಸಿದಾಗ ಗುಪ್ತವಾಗಿ ನಿರ್ಮಿಸಿದ ಅಂಡರ್ ಟ್ಯಾಂಕ್ ಒಂದು ಪತ್ತೆಯಾಗಿದೆ.

'; } else { echo "Sorry! You are Blocked from seeing the Ads"; } ?>

ಎರಡು ಟ್ಯಾಂಕರ್‌ಗಳಿಂದ ಪೆಟ್ರೋಲನ್ನು ಭೂಗತ ಟ್ಯಾಂಕ್‌ಗೆ ತುಂಬಿಸಿ ಬಳಿಕ ಟ್ಯಾಂಕರ್‌ಗೆ ಸೀಮೆಎಣ್ಣೆಯನ್ನು ರಾಸಾಯನಿಕ ಬಳಸಿ ಮಿಶ್ರಣ ಮಾಡಲಾಗುತ್ತಿತ್ತೆಂದು ದಾಳಿಯ ವೇಳೆ‌ ತಿಳಿದು ಬಂದಿದೆ.

ಕೃತ್ಯ ನಡೆಸುತ್ತಿದ್ದ ಆರೋಪಿಗಳು ತಪ್ಪಿಸಿಕೊಂಡಿದ್ದು ಈ ಹಿಂದೆ ಐಜೆಪಿ ಸತ್ಯನಾರಾಯಣ ಅವರು 2012ರಲ್ಲಿ ಮಧ್ಯರಾತ್ರಿ ರಹಸ್ಯ ದಾಳಿ ನಡೆಸಿ ಇಂತಹ ದಂಧೆಯನ್ನು ಪತ್ತೆ ಹಚ್ಚಿ ಮಟ್ಟ ಹಾಕಿದ್ದರು.

'; } else { echo "Sorry! You are Blocked from seeing the Ads"; } ?>

ಇದೀಗ ಮತ್ತೆ ಪೆಟ್ರೋಲ್ ಕಲಬೆರಕೆ ದಂಧ ಈ ಭಾಗದಲ್ಲಿ ಅವ್ಯಾಹತವಾಗಿದ್ದು, ಕೆಲವೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಆಹಾರ ಇಲಾಖೆಯ ಮಾಣಿಕ್ಯ, ಚೇತನ್, ಸುರತ್ಕಲ್ ಎಸ್ಎಐ ಪುನೀತ್ ಗಾಂವ್‌‌ಕರ್,ಉಪತಹಶೀಲ್ದಾರ್ ನವೀನ್, ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರೆಂದು ವರದಿಯಾಗಿದೆ.

ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 40 ಲಕ್ಷ ರೂ ಮೌಲ್ಯದ 2 ಟ್ಯಾಂಕರ್, 12 ಲಕ್ಷ ರೂ.ಮೌಲ್ಯದ ಪಿಕಪ್, ಲಕ್ಷಾಂತರ ರೂ ಮೌಲ್ಯದ 16 ಸಾವಿರ ಲೀಟರ್ ATF ಪೆಟ್ರೋಲ್ ಹಾಗೂ ಡ್ರಮ್‌ಗಳು, ಒಂದು ಜನರೇಟರ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!