ಬಾಗಲಕೋಟೆ: ದೆಹಲಿಯ ಶ್ರದ್ದಾ ಕೊಲೆಯನ್ನು ಬೆಚ್ಚಿ ಬೀಳಿಸುವಂತ ದಾರುಣವಾದ ಕೊಲೆಗೆ ಕರ್ನಾಟಕ ಬೆಚ್ಚಿ ಬಿದ್ದಿದೆ.ಮದ್ಯ ಸೇವಿಸಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಎಂದು ಆರೋಪಿಸಿ ಮಗನೇ ತಂದೆಯನ್ನು ರಾಡಿನಿಂದ ಹೊಡೆದು ಕೊಂದ ಘಟನೆ ಬಾಗಲಕೋಟೆಯ ಮಧೋಳದಲ್ಲಿ ನಡೆದಿದೆ.

ತಂದೆಯನ್ನು ರಾಡಿನಿಂದ ಕೊಂದು ಮೃತದೇಹವನ್ನು 30 ಕ್ಕೂ ಮಿಕ್ಕ ತುಂಡುಗಳನ್ನಾಗಿ ಮಾಡಿ ಬೋರ್ ವೆಲ್ ಗೆ ತುರುಕಿದ ಘಟನೆ ಜನರನ್ನೇ ಬೆಚ್ಚಿ ಬೀಳಿಸಿದೆ.
ಮೃತಪಟ್ಟವರನ್ನು ಪರಶುರಾಮ(54) ಕೊಳಲಿ ಎಂದು,
ಕೊಲೆ ಮಾಡಿದಾತ ಮಗ ವಿಠಲ್ (20)ಎಂದು ಗುರುತಿಸಲಾಗಿದೆ.
ದಿನನಿತ್ಯ ರಾತ್ರಿ ಮದ್ಯ ಸೇವಿಸಿ ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದಾನೆ ಎಂದು ಹೇಳಿ ಮಗ ತಂದೆಯ ತಲೆಗೆ ರಾಡ್ ನಿಂದ ಹೊಡೆದಿದ್ದು ಹೊಡೆತದ ರಭಸಕ್ಕೆ ಪರಶುರಾಮ ಸಾವನ್ನಪ್ಪಿದ್ದು ಮಗ ತಂದೆಯ ಶರೀರವನ್ನು ತಮ್ಮದೇ ಗದ್ದೆಯಲ್ಲಿರುವ ಕೊಳವೆ ಬಾವಿಗೆ ಎಸೆಯಲು ನೋಡಿದ್ದು ಹಾಗೆ ಪರಶುರಾಮ ರ ಮೃತದೇಹ ಬೋರ್ ವೆಲ್ ನ ಒಳಗಡೆ ಹೋಗದೇ ಇದ್ದಿದ್ದರಿಂದ ಸ್ವತಃ ತಂದೆಯ ಮೃತ ಶರೀರವನ್ನು 30ಕ್ಕೂ ಹೆಚ್ಚು ತುಂಡುಗಳನ್ನಾಗಿಸಿ ಬೋರ್ ವೆಲ್ ಒಳಗಡೆ ತುರುಕಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನು ಬೋರ್ ವೆಲ್ ಸಮೀಪ ವಾಸನೆ ಬರಲು ಶುರುವಾಗಿದ್ದು ಸಾರ್ವಜನಿಕರಿಗೆ ಸಂಶಯ ಬಂದ ಕಾರಣ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಜೆ.ಸಿ.ಬಿ ಮುಕಾಂತರ ಬೋರ್ ವೆಲ್ ಅಗೆದು ನೋಡಿದಾಗ ಮೃತದೇಹ ಪತ್ತೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮಗ ವಿಠಲ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.