ಹಾವೇರಿ: ಕಾರಿಗೆ ಬಸ್ ಡಿಕ್ಕಿ ಹೊಡೆದು ಕಾಸರಗೋಡು ಮೂಲದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೆಳಗಲಪೇಟೆ ಬಳಿ ನಡೆದಿದೆ.

ಕೇರಳದ ಕಾಸರಗೋಡು ಜಿಲ್ಲೆಯ ತಳಂಗರೆ ನುಸ್ರ ತ್ ನಗರದ ಮುಹಮ್ಮದ್ (65) ಪತ್ನಿ ಆಯಿಷಾ(62) ಹಾಗೂ ಮೊಮ್ಮಗಳು ಅಪಘಾತದಲ್ಲಿ ಮೃತಪಟ್ಟವರು.
ಹುಬ್ಬಳ್ಳಿಯಿಂದ ಹಾನಗಲ್ ಕಡೆ ಹೊರಟಿದ್ದ ಕಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೃತರ ಪುತ್ರ ಝಿಯಾದ್, ಸೊಸೆ ಹಾಗೂ ಮೊಮ್ಮಕ್ಕಳು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿ ಸಿಕ್ಕಿದ್ದವರನ್ನು ಸ್ಥಳೀಯರು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.
2014 ರ ಡಿಸೆಂಬರ್ ತಿಂಗಳು ಕಾಸರಗೋಡಿನಲ್ಲಿ RSS ಕಾರ್ಯಕರ್ತರಿಂದ ಕೊಲೆಗೈಯ್ಯಲ್ಪಟ್ಟ ಝೈನುಲ್ ಆಬಿದೀನ್ ಎಂಬವರ ಕುಟುಂಬ ಸಂಚರಿಸುತ್ತಿದ್ದ ಕಾರು ಎನ್ನಲಾಗಿದೆ. ಘಟನೆಯಲ್ಲಿ ಝೈನುಲ್ ಆಬಿದೀನ್ ಎಂಬವರ ತಂದೆ, ತಾಯಿ ಹಾಗೂ ಸಹೋದರನ ಮಗಳು ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ.