ಮಂಗಳೂರು: ಜಲೀಲ್ ಹತ್ಯೆ ಖಂಡಿಸಿ ಸುನ್ನೀ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ಮಂಗಳೂರುನ ಕ್ಲಾಕ್ ಟವರ್ ಬಳಿ ನಡೆಯುತ್ತಿದ್ದು, ಜಲೀಲ್ ಹತ್ಯೆಗೆ ನ್ಯಾಯ ಕೋರಿ ಸಾವಿರಾರು ಮಂದಿ ಪ್ರತಿಭಟನೆಗೆ ಸಾಕ್ಷಿಯಾಗುತ್ತಾ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಮೃತ ಜಲೀಲ್ ಸಹೋದರ ಮುಹಮ್ಮದ್ ಮುಸ್ಲಿಯಾರ್ ಸಹಿತ ಸಂಘಟನಾ ರಾಜಕೀಯ ಸಾಮಾಜಿಕ ಹಲವಾರು ಗಣ್ಯರು ಪಾಲ್ಗೊಂಡಿದ್ದಾರೆ
ಓರ್ವ ಆರೋಪಿಯ ಬಂಧನ:
ಸುರತ್ಕಲ್ ಕೃಷ್ಣಪುರದಲ್ಲಿ ಶನಿವಾರ ನಡೆದ ಜಲೀಲ್ ಹತ್ಯೆ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೃಷ್ಣಾಪುರ 4ನೇ ಬ್ಲಾಕಿನ ಲಕ್ಷ್ಮೀಶ ದೇವಾಡಿಗ (28) ಬಂಧಿತ ಆರೋಪಿಯಾಗಿದ್ದಾನೆ.
ಜಲೀಲ್ ಹತ್ಯೆ ಪ್ರಕರಣದಲ್ಲಿ ಇದುವರೆಗೆ ಬಂಧಿತರಾದವರ ಸಂಖ್ಯೆ 4ಕ್ಕೇರಿಕೆಯಾಗಿದೆ.
ನಿನ್ನೆ ಬಂಧಿಸಲ್ಪಟ್ಟ ಮೂವರು ಪ್ರಮುಖ ಆರೋಪಿಗಳಾದ ಕೃಷ್ಣಾಪುರ ನೈತಂಗಡಿಯ ಶೈಲೇಶ್ ಯಾನೆ ಶೈಲೇಶ್ ಪೂಜಾರಿ , ಹೆಜಮಾಡಿ ಎನ್.ಎಸ್.ರೋಡ್‌ನ ಸವಿನ್ ಕಾಂಚನ್ ಯಾನೆ ಮುನ್ನ ಮತ್ತು ಕಾಟಿಪಳ್ಳ ಮೂರನೇ ಬ್ಲಾಕ್‌ನ ಪವನ್ ಯಾನೆ ಪಚ್ಚು ಈಗಾಗಾಲೇ 10 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದು ತನಿಖೆ ಪ್ರಗತಿಯಲ್ಲಿದೆ.