ಪುತ್ತೂರು: ಎಸ್ಸೆಸ್ಸೆಫ್ ಕುಂಬ್ರ ಶಾಖೆ ಇದರ ವಾರ್ಷಿಕ ಮಹಾಸಭೆ ಕುಂಬ್ರ ಕಚೇರಿಯಲ್ಲಿ ನಡೆಯಿತು.
ನೌಫಲ್ ಹಿಮಮಿ ದುಆ ನಡೆಸಿದರು. ಸಭೆಯ ಅಧ್ಯಕ್ಷತೆಯನ್ನು ಅಶ್ರಫ್ ಸಖಾಫಿ ವಹಿಸಿದ್ದರು. ಆಬಿದ್ ಕುಯ್ಯಾರ್ ವಾರ್ಷಿಕ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು.
ನಂತರ ಕುಂಬ್ರ ಸೆಕ್ಟರ್ ಅಧ್ಯಕ್ಷರಾದ ಇಲ್ಯಾಸ್ ಕಟ್ಟತ್ತಾರ್ ಹಾಗೂ ಕಾರ್ಯದರ್ಶಿ ಇರ್ಶಾದ್ ಗಟ್ಟಮನೆ ಯವರ ಸಮ್ಮುಖದಲ್ಲಿ ನೂತನ ಸಮೀತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಶ್ರಫ್ ಸಖಾಫಿ, ಪ್ರ. ಕಾರ್ಯದರ್ಶಿಯಾಗಿ ನೌಫಲ್ ಹಿಮಮಿ ಸಖಾಫಿ, ಕೋಶಾಧಿಕಾರಿಯಾಗಿ ಆಬಿದ್ ಕುಯ್ಯಾರ್ ರನ್ನು ಆಯ್ಕೆ ಮಾಡಲಾಯಿತು.
ಹಾಫಿಳ್ ರಂಶೀದ್ ಸಖಾಫಿರವರು ಕಲ್ಚರಲ್ ಕಾರ್ಯದರ್ಶಿಯಾಗಿಯೂ, ಸಾದಿಖ್ ಫಾಳಿಳಿ ರೈಂಬೊ ಕಾರ್ಯದರ್ಶಿಯಾಗಿ, ಹಾಫಿಳ್ ಮುಆಝ್ ದಆವಾ ಕಾರ್ಯದರ್ಶಿಯಾಗಿ, ಅನ್ವರ್ ಸಾದಿಖ್ ರೀಡ್ ಪ್ಲಸ್ ಕಾರ್ಯದರ್ಶಿಯಾಗಿ, ಶಾಹಿದ್ ಕುಂಬ್ರ ಕ್ಯಾಂಪಸ್ ಕಾರ್ಯದರ್ಶಿಯಾಗಿ, ಅಮೀನ್ ಕುಂಬ್ರ ಮೀಡಿಯಾ ಕಾರ್ಯದರ್ಶಿಯಾಗಿ, ಫಾರಿಸ್ ಶಾಂತಿಯಡಿ ವಿಸ್ಡಂ ಕಾರ್ಯದರ್ಶಿಯಾಗಿ ಹಾಗೂ ಕೈಸ್ ಶೇಕಮಲೆಯವರನ್ನು Q,D ಯಾಗಿ ಆಯ್ಕೆ ಮಾಡಲಾಯಿತು.
ಫಾರೂಕ್ ಶಾಂತಿಯಡಿ,ತಂಸೀಫ್ ಅರಿಯಡ್ಕ,ಉಝೈಫ್ ಅರಿಯಡ್ಕ,
ದಸ್ತಗಿರ್ ಕುಂಬ್ರ,ಹಾಶಿರ್ ಶಾಂತಿಯಡಿ,ನವಾಝ್ ಡಿಂಬ್ರಿ, ಹಾಶಿರ್ ಸಾರಪುಣಿ ಹಾಗೂ ಸಅಝಾದ್
ಕಾರ್ಯಕಾರಿ ಸಮೀತಿಯ ಸದಸ್ಯರಾಗಿ ಆಯ್ಕೆ ಮಾಡಲಾಯಿತು.