dtvkannada

'; } else { echo "Sorry! You are Blocked from seeing the Ads"; } ?>

ದೆಹಲಿಯಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆಸೀಸ್ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿದ ಟೀಂ ಇಂಡಿಯಾ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ನೀಡಿದ 115 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ರೋಹಿತ್ ಪಡೆ ಮೂರನೇ ದಿನದಾಟದ 2ನೇ ಸೆಷನ್​ಲ್ಲಿಯೇ ಗುರಿ ತಲುಪಿತು. ಈ ಗೆಲುವಿನೊಂದಿಗೆ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲಬೇಕೆನ್ನುವ ಆಸೀಸ್ ತಂಡದ ಮಹಾ ಕನಸನ್ನು ಟೀಂ ಇಂಡಿಯಾ ಭಗ್ನ ಮಾಡಿದೆ. ಇದೀಗ ಈ ಸರಣಿಯ ಉಳಿದೆರಡು ಪಂದ್ಯಗಳಲ್ಲಿ ಆಸೀಸ್ ಗೆದ್ದರೂ ಸರಣಿ ಸಮಬಲದೊಂದಿಗೆ ಅಂತ್ಯಗೊಳ್ಳಲಿದೆ.

ಭಾರತದ ಸ್ಪಿನ್ ದಾಳಿ ಮುಂದೆ ಮಂಕಾದ ಆಸೀಸ್ ಪಡೆ ಕೇವಲ 113 ರನ್​ಗಳಿಗೆ ತನ್ನ ಎರಡನೇ ಇನ್ನಿಂಗ್ಸ್ ಮುಗಿಸಿದೆ. ಈ ಮೂಲಕ ಭಾರತಕ್ಕೆ 115 ರನ್​ಗಳ ಗೆಲುವಿನ ಗುರಿ ನೀಡಿತ್ತು.

'; } else { echo "Sorry! You are Blocked from seeing the Ads"; } ?>

ನಿನ್ನೆಯ ಎರಡನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯದ ಇನ್ನಿಂಗ್ಸ್ ಸುಸ್ಥಿತಿಯಲ್ಲಿರುವಂತೆ ತೋರುತ್ತಿತ್ತು. ದಿನದಾಟದಂತ್ಯಕ್ಕೆ ಆಸೀಸ್ ಪಡೆ ಕೇವಲ 1 ವಿಕೆಟ್‌ ಕಳೆದುಕೊಂಡು 61 ಕಲೆ ಹಾಕಿತ್ತು. ಹೀಗಾಗಿ ಎರಡನೇ ಇನ್ನಿಂಗ್ಸ್ನಲ್ಲಿ ಆಸೀಸ್ ಪಡೆ ಬೃಹತ್ ಟಾರ್ಗೆಟ್ ಸೆಟ್ ಮಾಡುವ ಸೂಚನೆ ನೀಡಿತ್ತು. ಆದರೆ ಮೂರನೇ ದಿನದಾಟ ಆರಂಭವಾದ ಬಳಿಕ ಲೆಕ್ಕಾಚಾರವೆಲ್ಲ ಬುಡಮೇಲಾಯಿತು. ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ಸ್ಪಿನ್ ದಾಳಿಗೆ ನಲುಗಿದ ಆಸೀಸ್ ಪಡೆ 3ನೇ ದಿನದಾಟದ ಮೊದಲ ಸೆಷನ್ನಲ್ಲಿ ಉಳಿದ 9 ವಿಕೆಟ್ ಕಳೆದುಕೊಂಡು ಕೇವಲ 52 ರನ್ ಕಲೆಹಾಕಿತು.

7 ವಿಕೆಟ್ ಪಡೆದ ಜಡೇಜಾ:
ಟೆಸ್ಟ್‌ನ ಮೂರನೇ ದಿನವಾದ ಭಾನುವಾರ ಆಸ್ಟ್ರೇಲಿಯಾಕ್ಕೆ ನಿರಾಶಾದಾಯಕ ಆರಂಭ ಸಿಕ್ಕಿತು. ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಸ್ಪಿನ್‌ಗೆ ಆಸೀಸ್ ತಂಡದ ಯಾವ ಬ್ಯಾಟ್ಸ್‌ಮನ್‌ ಬಳಿಯೂ ಉತ್ತರ ಇರಲಿಲ್ಲ. ಈ ಪಂದ್ಯದಲ್ಲಿ ತಮ್ಮ ವೃತ್ತಿ ಜೀವನದ ಅತ್ಯುತ್ತಮ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಒಂದೇ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್ ಪಡೆದರು. ಈ ಇನ್ನಿಂಗ್ಸ್​ನಲ್ಲಿ 12.1 ಓವರ್‌ ಬೌಲ್ ಮಾಡಿದ ಜಡೇಜಾ 42 ರನ್ ನೀಡಿ ಏಳು ವಿಕೆಟ್ ಪಡೆದರೆ, ಅಶ್ವಿನ್ 16 ಓವರ್‌ಗಳಲ್ಲಿ 59 ರನ್ ನೀಡಿ ಮೂರು ವಿಕೆಟ್ ಪಡೆದರು.

'; } else { echo "Sorry! You are Blocked from seeing the Ads"; } ?>

ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ 43 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಜೊತೆಗೆ ಮಾರ್ನಸ್ ಲ್ಯಾಬುಸ್ಚಾಗ್ನೆ (35) ಅವರೊಂದಿಗೆ ಎರಡನೇ ವಿಕೆಟ್‌ಗೆ 42 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಆದರೆ ಮೂರನೇ ದಿನದ ಮೊದಲ ಓವರ್‌ನಲ್ಲಿ ಈ ಜೊತೆಯಾಟವನ್ನು ಮುರಿಯುವುದರೊಂದಿಗೆ ಭಾರತೀಯ ಬೌಲರ್‌ಗಳು ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದರು. ಬಳಿಕ ಆಸ್ಟ್ರೇಲಿಯಾ ತಂಡ ತನ್ನ ಕೊನೆಯ ಏಳು ವಿಕೆಟ್‌ಗಳನ್ನು ಕೇವಲ 18 ರನ್‌ಗಳ ಅಂತರದಲ್ಲಿ ಕಳೆದುಕೊಂಡಿತು

ಮೂರನೇ ದಿನ 61 ರನ್​ಗಳಿಂದ ಇನ್ನಿಂಗ್ಸ್ ಮುಂದುವರೆಸಿದ ಆಸೀಸ್ ಪರ ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಬುಶೆನ್ ಕ್ರೀಸ್‌ನಲ್ಲಿದ್ದರು. ಆದರೆ ಆರ್. ಅಶ್ವಿನ್ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಟ್ರಾವಿಸ್ ಹೆಡ್ ಅವರನ್ನು ಬಲಿಪಶು ಮಾಡಿದರು. ಹೆಡ್ ವಿಕೆಟ್ ನಂತರ ಸ್ಮಿತ್ ಮತ್ತು ಲಬುಶೆನ್ ಜೊತೆಯಾಟವನ್ನು ರೂಪಿಸಲು ಪ್ರಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ. ಅಶ್ವಿನ್ ಸ್ಮಿತ್ ಅವರನ್ನು ಔಟ್ ಮಾಡುವ ಮೂಲಕ ತಂಡಕ್ಕೆ ಮೂರನೇ ಹೊಡೆತ ನೀಡಿದರು.

ಜಡೇಜಾ ಸ್ಪಿನ್ಗೆ ಸೈಲೆಂಟ್ ಆದ ಆಸೀಸ್:
ಸ್ಮಿತ್ ಔಟಾದ ನಂತರ, ಲಬುಶೆನ್ ಕೂಡ ಹೆಚ್ಚು ಹೊತ್ತು ನಿಲ್ಲದೆ 35 ರನ್ ಗಳಿಸಿ ಔಟಾದರು. ಇಲ್ಲಿಂದ ಆಸ್ಟ್ರೇಲಿಯಾದ ಬ್ಯಾಟಿಂಗ್ ಪತನವಾಗಲು ಆರಂಭವಾಯಿತು. ಮುಂದಿನ ಮೂರು ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಆಸೀಸ್ ತಂಡ ಕಳೆದುಕೊಂಡಿತು. ಮ್ಯಾಟ್ ರೆನ್ಶಾ (2) ಅಶ್ವಿನ್ಗೆ ಬಲಿಯಾದರೆ, ಪೀಟರ್ ಹ್ಯಾಂಡ್ಸ್‌ಕಾಂಬ್ (0), ಕಮಿನ್ಸ್ ಅವರನ್ನು ಒಂದೇ ಓವರ್‌ನಲ್ಲಿ ಜಡೇಜಾ ಪೆವಿಲಿಯನ್ಗಟ್ಟಿದರು. ಬಳಿಕ ಅಲೆಕ್ಸ್ ಕ್ಯಾರಿ ಕೂಡ ಯಾವುದೇ ಪ್ರಭಾವ ಬೀರಲಾಗದೆ ಜಡೇಜಾಗೆ ಬಲಿಯಾದರು. ಅಂತಿಮವಾಗಿ ಲಿಯಾನ್ (8 ರನ್) ಮತ್ತು ಕುನ್ಹೆಮನ್ ಖಾತೆ ತೆರೆಯದೆ ಔಟಾಗುವುದರೊಂದಿಗೆ ಆಸೀಸ್ ಇನ್ನಿಂಗ್ಸ್ಗೆ ತೆರೆ ಎಳೆದರು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!