dtvkannada

'; } else { echo "Sorry! You are Blocked from seeing the Ads"; } ?>

ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವರದಾಪುರ ಗ್ರಾಮದ ಭಂಗಿ ಮಲ್ಲಪ್ಪ ಹಾಗೂ ಆತನ ಪತ್ನಿ ಲಕ್ಷ್ಮೀ ಮದುವೆಯಾಗಿ 16 ವರ್ಷ ಕಳೆದಿದೆ. ಮಲ್ಲಪ್ಪನ ಜೊತೆ ಸುಖವಾಗಿ ಸಂಸಾರ ಹೊಂದಿದ್ದ ಲಕ್ಷ್ಮೀಗೆ ಇಬ್ಬರು ಗಂಡು, ಓರ್ವ ಹೆಣ್ಣು ಮಗುವಿದೆ. ಆದ್ರೆ ಗಂಡ ಮಲ್ಲಪ್ಪನಿಗೆ ಪತ್ನಿಯ ನಡತೆಯ ಮೇಲೆ ಅನುಮಾನ ಶುರುವಾಗಿದೆ.‌ ಆಗಾಗ ಪತ್ನಿಯ ಜೊತೆ ಜಗಳ ಮಾಡುತ್ತಿದ್ದ ಮಲ್ಲಪ್ಪ ನಿನ್ನೆ(ಫೆ.18) ರಾತ್ರಿ ಪತ್ನಿ ತಲೆಯನ್ನೆ ಸೀಳಿ ಹಾಕಿದ್ದಾನೆ. ಮಲಗಿದ್ದ ಪತ್ನಿಯ ತಲೆಗೆ ಹೊಡೆದು ಹತ್ಯೆ ಮಾಡಿರುವ ಮಲ್ಲಪ್ಪ ಪತ್ನಿ ಸಾವನ್ನಪ್ಪುತ್ತಿದ್ದಂತೆ ಪರಾರಿಯಾಗಿದ್ದ.

ಊರಲ್ಲಿ ವ್ಯವಸಾಯ ಮಾಡುತ್ತಾ. ರಾಜಿ ಪಂಚಾಯತಿ ಮಾಡುತ್ತಿದ್ದ ಮಲ್ಲಪ್ಪ ಪತ್ನಿಯ ವಿಚಾರದಲ್ಲಿ ಅನುಮಾನ ಹೊಂದಿದ್ದ. ಮಾವನ ಮಗಳನ್ನ ಮದುವೆಯಾಗಿದ್ದ ಮಲ್ಲಪ್ಪ ಮೂರು ಮಕ್ಕಳಾದ ಮೇಲೂ ಅನುಮಾನ ಪಡುತ್ತಿದ್ದ. ಇದೇ ವಿಚಾರವಾಗಿ ರಾತ್ರಿ ಪತ್ನಿ ಊಟ ಮಾಡಿ ಮನೆಯಲ್ಲಿ ಮಲಗಿದ್ದ ವೇಳೆ ಹಾರಿಕೋಲಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದ. ಇದೀಗ ಮಲ್ಲಪ್ಪನನ್ನ ಮರಿಯಮ್ಮನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

'; } else { echo "Sorry! You are Blocked from seeing the Ads"; } ?>

ಘಟನೆಯ ನಂತರ ಸುದ್ದಿ ತಿಳಿಯುತ್ತಿದ್ದಂತೆ ಲಕ್ಷ್ಮೀ ಪೋಷಕರು ಮರಿಯಮ್ಮನಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿ. ನ್ಯಾಯ ಕೊಡಿಸುವಂತೆ ಮನವಿ ಮಾಡುತ್ತಿದ್ದಾರೆ.

ಕಳೆದ ಹತ್ತು ವರ್ಷದ ಹಿಂದೆ ಅಪಘಾತದಿಂದ ತಲೆಗೆ ಗಾಯವಾದ ನಂತರ ಆರೋಪಿ ಮಲ್ಲಪ್ಪ ಸೈಕೋ ರೀತಿ ವರ್ತನೆ ಮಾಡುತ್ತಿದ್ದನಂತೆ. ಇದರಿಂದಾಗಿ ಪತ್ನಿಯ ಮೇಲೆ ಅನುಮಾನ ಪಟ್ಟು ಇದೀಗ ಪತ್ನಿಯನ್ನೆ ಹತ್ಯೆ ಮಾಡಿ ಕಂಬಿ ಪಾಲಾಗಿದ್ದಾನೆ. ಇದೀಗ ಮೂರು ಮಕ್ಕಳು ಅನಾಥರಾಗಿದ್ದು ಗ್ರಾಮದಲ್ಲಿ ಸಶ್ಮಾನ ಮೌನ ಆವರಿಸಿದೆ‌.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!