ಮೆಟಾ (Meta) ಒಡೆತನದ ನಂಬರ್ ಒನ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಇಂದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ವಿಶ್ವದಲ್ಲಿ 2.24 ಬಿಲಿಯನ್ ತಿಂಗಳು ಬಳಕೆದಾರರನ್ನು ಹೊಂದಿದೆ. ವಾರಕ್ಕೆ ಒಂದರಂತೆ ಹೊಸ ಫೀಚರ್ಗಳನ್ನು ಪರಿಚತಿಸುವ ವಾಟ್ಸ್ಆ್ಯಪ್ನಲ್ಲಿ (WhatsApp) ಅನೇಕ ಮಂದಿಗೆ ತಿಳಿದಿರದ ಅದೆಷ್ಟೊ ಟ್ರಿಕ್ಗಳು ಅಡಕವಾಗಿದೆ. ಅದು ಡಿಲೀಟ್ ಆದ ಮೆಸೇಜ್ ಅನ್ನು ನೋಡುವುದು ಇರಬಹುದು ಅಥವಾ ನಮ್ಮ ಡಿಪಿಯನ್ನು ಯಾರೆಲ್ಲ ನೋಡಿದ್ದಾರೆಂದು ತಿಳಿಯುವುದು ಇರಬಹುದು.
ಅಂತೆಯೆ ವಾಟ್ಸ್ಆ್ಯಪ್ನಲ್ಲಿ ನೀವು ಆನ್ಲೈನ್ನಲ್ಲಿ (Online) ಇದ್ದರೂ ಆಫ್ಲೈನ್ ಕಾಣಿಸುವಂತೆ ಮಾಡಬಹುದು. ಇದಕ್ಕೂ ಟ್ರಿಕ್ಗಳಿವೆ. ಹಾಗಂತೆ ನೀವು ಥರ್ಡ್ ಪಾರ್ಟಿ ಆ್ಯಪ್ ಮೊರೆ ಹೋಗಬೇಕು ಎಂದಿಲ್ಲ. ಬದಲಾಗಿ ವಾಟ್ಸ್ಆ್ಯಪ್ನಲ್ಲೇ ಕೆಲ ಸೆಟ್ಟಿಂಗ್ಗಳನ್ನು ಬದಲಾಯಿಸಿ ಈರೀತಿ ಮಾಡಬಹುದು.
ವಾಟ್ಸ್ಆ್ಯಪ್ನಲ್ಲಿ ನೀವು ಆನ್ಲೈನ್ನಲ್ಲಿ ಇದ್ದರೂ ಆಫ್ಲೈನ್ ಇರುವಂತೆ ಕಾಣಲಿ ಈ ಕೆಳಗಿನ ಸೂತ್ರ ಅನುಸರಿಸಿ.
•ಮೊದಲಿಗೆ ನಿಮ್ಮ ವಾಟ್ಸ್ಆ್ಯಪ್ ಅನ್ನು ಹೊಸ ವರ್ಷನ್ಗೆ ಅಪ್ಡೇಟ್ ಮಾಡಿಕೊಳ್ಳಿ.
•ಆ ಬಳಿಕ, ವಾಟ್ಸ್ಆ್ಯಪ್ ತೆರೆಯಿರಿ ಮತ್ತು ಸೆಟ್ಟಿಂಗ್ ಟ್ಯಾಬ್‌ಗೆ ಹೋಗಿ
•ನಂತರ ಅಲ್ಲಿ ಕಾಣಿಸುವ ಪ್ರೈವಸಿ ಆಯ್ಕೆ ಮೇಲೆ ಕ್ಲಿಕ್ ಮಾಡಿ
•ಈಗ ಮೊದಲಿಗೆ ಕಾಣಿಸುವ ಲಾಸ್ಟ್ ಸೀನ್ ಮತ್ತು ಆನ್ಲೈನ್ ಎಂಬ ಆಯ್ಕೆ ಸೆಲೆಕ್ಟ್ ಮಾಡಿರಿ
•ಇಲ್ಲಿ ನಿಮಗೆ ಎರಡು ಆಯ್ಕೆಗಳು ಕಾಣಿಸುತ್ತದೆ. ನನ್ನ ಲಾಸ್ಟ್ ಸೀನ್ ಯಾರು ನೋಡಬೇಕು ಮತ್ತು ನಾನು ಆನ್ಲೈನ್ನಲ್ಲಿ ಇದ್ದಾಗ ಯಾರಿಗೆ ಕಾಣಬೇಕು?
•ಆನ್ಲೈನ್ನಲ್ಲಿ ಇದ್ದಾಗ ಯಾರಿಗೆ ಕಾಣಬೇಕು ಎಂಬಲ್ಲಿ Everyone ಹಾಗೂ Same as Last Seen ಎರಡು ಆಯ್ಕೆ ಇದೆ
•ಇಲ್ಲಿ ನಿಮಗೆ ಯಾವ ಆಯ್ಕೆ ಬೇಕೋ ಅದನ್ನು ಸೆಲೆಕ್ಟ್ ಮಾಡಿದರೆ ಆಯಿತು